ಮೈಸೂರು: ಪಶುಪಾಲನ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆ, ಟಿವಿಎಸ್ ಕಂಪನಿಯ ಶ್ರೀನಿವಾಸನ್ ಸೇವಾ ಟ್ರಸ್ಟ್, ಕೃಷಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಮೈಸೂರು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ “ಹಳ್ಳಿ ಹಬ್ಬ” ಆಯೋಜಿಸಲಾಗಿತ್ತು.
ಇದರ ಅಂಗವಾಗಿ ಮಿಶ್ರತಳಿ ಹೆಣ್ಣುಕರುಗಳ ಪ್ರದರ್ಶನ ಮತ್ತು ಪಶು ಆರೋಗ್ಯ ತಪಾಸಣಾ ಶಿಬಿರಕ್ಕೆ ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ ಡಾ:ಶಿವಣ್ಣ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ:ನಾಗರಾಜು, ಸಹಾಯಕ ನಿರ್ದೇಶಕ ಡಾ:ಮ.ಪು. ಪೂರ್ಣಾನಂದ, ಶ್ರೀನಿವಾಸನ್ ಸೇವಾ ಟ್ರಸ್ಟ್ ಹಿರಿಯ ನಿರ್ದೇಶಕ ಮೋಹನ್ ಕರ್ನಾಟ್ ಮತ್ತು ಎಲ್ಲಾ ಇಲಾಖೆಯ ಮುಖ್ಯಸ್ಥರು, ಸಿಂಧುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮ ಹಾಗೂ ಗ್ರಾಮದ ಮುಖಂಡರು ಭಾಗವಹಿಸಿದ್ದರು.
ಶಿಬಿರದಲ್ಲಿ ತಜ್ಞ ಪಶುವೈದ್ಯರಾದ ಡಾ:ಹರೀಶ್, ಡಾ:ಅಶೋಕಕುಮಾರ್, ಡಾ:ಸಂತೋಷ ಒಡೆಯರ್, ಡಾ|ನಂದಿನಿ, ಡಾ|ರಾಜೇಂದ್ರ ಪ್ರಸಾದ, ಡಾ:ರಮಿತ್, ಡಾ|ವಿಶಾಲಾಕ್ಷಿ ಕೋಲಿ, ಡಾ|ರಕ್ಷಿತ್, ಡಾ|ಸುನೀಲ್ ಕುಮಾರ್, ಪಶು ಪರೀಕ್ಷಕರಾದ ಪಾಂಡುರಂಗ, ಸಿದ್ಧರಾಜು, ಮಹಾಲಕ್ಷ್ಮಿ, ಸೃಜನ್, ಕವಿತಾ, ಪಶುಸಖಿ ಗೀತಾ ಭಾಗವಹಿಸಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಡಾ| ಮಧುಕರ್ ವಹಿಸಿದ್ದರು. ಈ ವೇಳೆ ಆರೋಗ್ಯ ಇಲಾಖೆಯ ಡಾ| ಬೃಂದಾ, ಕೃಷಿ ಇಲಾಖೆಯ ಪಲ್ಲವಿ, ಶಿಕ್ಷಣ ಇಲಾಖೆಯ ಪ್ರಕಾಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಿಬ್ಬಯ್ಯ, ಪಿ.ಡಿ.ಒ ಶಿವಕುಮಾರ ಉಪಸ್ಥಿತರಿದ್ದರು.