ವರದಿ :ಸ್ಟೀಫನ್ ಜೇಮ್ಸ್.
ಮೂಡಲಗಿ: ಪಟ್ಟಣ ಸಮೀಪದ ಗುರ್ಲಾಪೂರ ಕ್ರಾಸ್ ಹೆದ್ದಾರಿ ಮೇಲೆ ಏಳು ದಿನಗಳಿಂದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಧರಣಿ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು ಈ ಬ್ರಹತ್ ಪ್ರತಿಭಟನೆಗೆ ಅನೇಕ ಮಠಾಧೀಶರು ಪಕ್ಷಾತೀತವಾಗಿ ರಾಜಕೀಯ ಮುಖಂಡರು ವಕೀಲರು, ಕಲಾವಿದರು, ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಪತ್ರಕರ್ತರು ಸೇರಿದಂತೆ ಅನೇಕ ಮುಖಂಡರು ಮುಷ್ಕರಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ ಅದೇ ರೀತಿ ಇಲ್ಲಿನ ಹವ್ಯಾಸಿ ಕಲಾವಿದ ಹಾಗೂ ಸ್ವತಃ ರೈತರೂ ಆಗಿರುವ ಸುರೇಶ ಬೆಳವಿ ಅವರು ಸರ್ಕಾರದ ಗಮನ ಸೆಳೆಯಲು ಬರಿಮೈಗೆ ಬಣ್ಣ ಬಳಿದು ಪ್ರತಿ ಟನ್ ಕಬ್ಬಿಗೆ ಸರ್ಕಾರ 3500 ರೂ ಕೊಡಲೇಬೇಕು ಎಂದು ಬರೆದು ಹಿಂಬದಿ ಕಬ್ಬು ಚಿತ್ರ ಹಾಕಿ ವಿನೂತನ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದರು.



