ಧಾರವಾಡ : ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರೊ. ಡಾ. ಎಸ್. ಬಿ. ನಾರಿ ಅವರ ಮಾರ್ಗದರ್ಶನದಲ್ಲಿ ” ಡೆಮೋಗ್ರಾಫಿಕ್ ಡಿವಿಡೆಂಡ್ ಆ್ಯಂಡ ಎಕಾನಾಮಿಕ್ ಗ್ರೋಥ್ ಇನ್ ಇಂಡಿಯಾ; ಆ್ಯನ್ ಇಂಟರ್-ಸ್ಟೇಟ್ ಅನಾಲಿಸಿಸ್” ವಿಷಯ ಕುರಿತು ಸಂಶೋಧನೆ ಕೈಗೊಂಡಿದ್ದ ಆನಂದ ಉಪ್ಪಾರ ಅವರಿಗೆ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ಪ್ರಧಾನ ಮಾಡಿದೆ.
ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಪ್ರೊ. ಡಾ. ಎಸ್. ಬಿ. ನಾರಿ ಅವರ ಮಾರ್ಗದರ್ಶನದಲ್ಲಿ ವಿಶ್ವವಿದ್ಯಾನಿಲಯಕ್ಕೆ ಸಾದರಪಡಿಸಿದ ಮಹಾಪ್ರಬಂಧವನ್ನು ಪರೀಕ್ಷಕರು ಮೌಲ್ಯಮಾಪನ ಮಾಡಿ ಸಲ್ಲಿಸಿದ ವರದಿಗಳನ್ನು ಅನುಮೊದಿಸಿದೆ. ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಕೋರ್ಸ್‍ವರ್ಕ್‍ದೊಂದಿಗೆ ಯು.ಜಿ.ಸಿ ಕ್ರಮ ನಿಯಮಾವಳಿ -2016 ಪ್ರಕಾರ ಪ್ರಧಾನ ಮಾಡಲು ಕುಲಪತಿಗಳು, ಸಿಂಡಿಕೇಟ್ ಸಭೆಯ ಪರವಾಗಿ ಒಪ್ಪಿಗೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.