ಮಂಡ್ಯ: ಅನಂತ್ ಕುಮಾರ್ ಹೆಗ್ಡೆ ಒಬ್ಬ ಹುಚ್ಚ, ಮೆಂಟಲ್ ಗಿರಾಕಿ. ಸಿದ್ದರಾಮಯ್ಯ ಬಗ್ಗೆ ಮಾತನಾಡಿದ್ರೆ ಜನ ಹಿಡಿದುಕೊಂಡು ಹೊಡಿತಾರೆ ಎಂದು ಶಾಸಕ ಗಣಿಗ ರವಿಕುಮಾರ್ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಬಗ್ಗೆ ಅನಂತಕುಮಾರ್ ಹೆಗ್ಡೆ ಹೇಳಿಕೆ ವಿಚಾರ ಕುರಿತು ಕುರಿತು ಪ್ರತಿಕ್ರಿಯಿಸಿ, ಅನಂತ್ ಕುಮಾರ್ ಒಬ್ಬ ಹುಚ್ಚ, ನಾಲ್ಕುವರೇ ವರ್ಷ ಅವರಿಗೆ ವೋಟ್ ಕೊಟ್ಟ ಮತದಾರರ ಮರೆತು ಕೋಮಾದಲ್ಲಿ ಕುಂಭ ಕರ್ಣ ರೀತಿ ಮಲಗಿದ್ದರು. ಈಗ ಎಲೆಕ್ಷನ್ ಅನ್ನೋ ಊಟ ಬಂದಿದೆ. ಟಿಕೆಟ್ ಗಾಗಿ ಹುಚ್ಚನ ರೀತಿ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಜನ ಮೆಚ್ಚಿದ ಮುಖ್ಯಮಂತ್ರಿ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ನಾಲಿಗೆ ಇದೆ ಅಂತ ಮಾತನಾಡಿದ್ರೆ ಜನ ಸಹಿಸಲ್ಲ. ಮೊದಲು ಮೆಂಟಲ್ ಆಸ್ಪತ್ರೆಗೆ ಹೋಗಿ ತೋರಿಸಿಕೊಳ್ಳಿ ಅಮೇಲೆ ಸಿದ್ದರಾಮಯ್ಯ ಬಗ್ಗೆ ಮಾತನಾಡಲಿ. ನಾಲ್ಕುವರೇ ವರ್ಷ ಉತ್ತರ ಕರ್ನಾಟಕಕ್ಕೆ ಕಡೆದು ಕಟ್ಟೆ ಹಾಕಿಲ್ಲ. ಹುಚ್ಚು ಹಿಡಿದಿದೆ ಅಂತ ಸಿದ್ದರಾಮಯ್ಯ ಬಗ್ಗೆ ಮಾತನಾಡುವುದಲ್ಲ ಎಂದು ಕಿಡಿಕಾರಿದರು.