ಚಾಮರಾಜನಗರ: 1999 ಫೆಬ್ರವರಿ 7ರಂದು ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಅನಿಲ್ ಕುಂಬ್ಳೆ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಒಂದೇ ಟೆಸ್ಟ್ ನಲ್ಲಿ ಎಲ್ಲಾ ಹತ್ತು ವಿಕೆಟ್ ಗಳನ್ನು ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು.
ಈಗ 25 ವರ್ಷ ಕಳೆದಿದೆ. ಅನಿಲ್ ಕುಂಬ್ಳೆ ರವರ ಈ ಸಾಧನೆಯನ್ನು ನೆನಪು ಮಾಡಿಕೊಳ್ಳುವ ಮೂಲಕ ಅನಿಲ್ ಕುಂಬ್ಳೆ 10 ವಿಕೆಟ್, 25 ವರ್ಷ ಸಂಭ್ರಮಾಚರಣೆ ಯನ್ನು ಋಗ್ವೇದಿ ಯೂತ್ ಕ್ಲಬ್ ಹಾಗೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಫೆಬ್ರವರಿ 8 ರಂದು ಸಂಜೆ 4:30ಕ್ಕೆ ಅಮಚವಾಡಿ ಯಲ್ಲಿ ಏರ್ಪಡಿಸಲಾಗಿದೆ .