ಕಾರವಾರ : ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಇತಿಹಾಸದಲ್ಲಿ (೧೯೫೧ ರಿಂದ ೨೦೨೪) ಈ ಸಲ ಅತಿ ಹೆಚ್ಚು ಮತ ಗಳಿಕೆ ಮಾಡುವ ಮೂಲಕ ಕಾಂಗ್ರೆಸ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಈ ಬಾರಿ ಲೋಕಸಭಾ ಚುನಾವಣಾ ಕಣದಲ್ಲಿ ಸೋತರೂ ಸಹ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ೪,೪೫, ೦೬೭ ಲಕ್ಷ ಮತಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಮತ ಕಾಂಗ್ರೆಸ್ ಪಕ್ಷಕ್ಕೆ ತಂದುಕೊಟ್ಟ ಅಭ್ಯರ್ಥಿ ಎನಿಸಿದ್ದಾರೆ.
೨೦೧೪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರಶಾಂತ ದೇಶಪಾಂಡೆ ೪,೦೬,೧೧೬ ಮತಗಳನ್ನ ಪಡೆದಿದ್ದರು. ೨೦೦೯ ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ೩,೧೬,೫೩೧ ಲಕ್ಷ ಮತ ಪಡೆದಿದ್ದರು. ೨೦೦೪ ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾರ್ಗರೆಟ್ ಆಳ್ವಾ ೨,೬೦,೯೪೮ ಲಕ್ಷ ಮತ ಪಡೆದಿದ್ದರು. ೧೯೯೯ ರ ಚುನಾವಣೆಯಲ್ಲಿ ಆಳ್ವಾ ೩,೫೬,೨೪೬. ಮತ ಪಡೆದು ಆಯ್ಕೆ ಸಹ ಆಗಿದ್ದರು.
ಉಳಿದಂತೆ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ೩ ಲಕ್ಷ ಮತಗಳನ್ನ ದಾಟಿಲ್ಲ. ಆದರೆ ಈ ಬಾರಿ ೪ , ೪೫, ೦೬೭ ಲಕ್ಷ ಮತ ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಅತೀ ಹೆಚ್ಚು ಮತ ಗಳಿಕೆ ಮಾಡಿದ ಚುನಾವಣೆ ಇದಾಗಿದೆ.