ಗದಗ: ಮುಂಡರಗಿ ಪಟ್ಟಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನ ಭಾಗ್ಯ ಅಕ್ಕಿ ವಶಕ್ಕೆ ಪಡೆದಿರುವ ಘಟನೆ ಮುಂಡರಗಿ ಪಟ್ಟಣದ ಕೆ ಎಫ್ ಸಿ ಎಸ್ ಗೋದಾಮ ಬಳಿ ನಡೆದಿದೆ.
ಆಹಾರ ಇಲಾಖೆ ಹಾಗೂ ಮುಂಡರಗಿ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ, 9 ಲಕ್ಷ 59 ಸಾವಿರ ಮೌಲ್ಯದ, ಒಂದು ಮಿನಿ ಲಾರಿ ಹಾಗೂ 50 ಕೆಜಿ ತೂಕದ 399 ಅಕ್ಕಿ ಚೀಲ ವಶಕ್ಕೆ ಪಡೆದಿದ್ದಾರೆ.
ದಂಧೆಕೋರರು ನಕಲಿ ದಾಖಲೆಗಳನ್ನು ಸೃಷ್ಠಿಸಿ ಅಕ್ರಮವಾಗಿ ಬೇರೆ ಕಡೆಯಿಂದ ಅಕ್ಕಿ ತಂದು, ಗೋದಾಮ ಬಳಿ ನಿಲ್ಲಿಸಿದಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮಿನಿ ಲಾರಿ ಚಾಲಕ ಹೊನ್ನಪ್ಪ ಹಾಗೂ ಲಾರಿ ಮಾಲೀಕನ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಂಡರಗಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.