ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ಅಂಕನಹಳ್ಳಿ ಅಣ್ಣೇಗೌಡ ಮತ್ತು ಉಪಾಧ್ಯಕ್ಷರಾಗಿ ಹೊಸೂರು ಎಚ್.ಎಸ್.ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾಲಿಗ್ರಾಮ ಪಟ್ಟಣದ ಕೃಷಿ ಇಲಾಖೆಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ
ಎ.ಎನ್.ಅಣ್ಣೇಗೌಡ (ಅಂಕನಹಳ್ಳಿ), ಉಪಾಧ್ಯಕ್ಷರಾಗಿ ಹೆಚ್.ಎಸ್.ರವಿ (ಹೊಸೂರು), ಪ್ರಧಾನ ಕಾರ್ಯದರ್ಶಿಯಾಗಿ
ಎಸ್.ಬಿ.ಪುಟ್ಟೇಗೌಡ (ಸಾಲಿಗ್ರಾಮ), ಖಜಾಂಚಿಯಾಗಿ ಎಸ್.ಎ.ಕೃಷ್ಣಕುಮಾರ (ಸಾಲೆಕೊಪ್ಪಲು) ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಹೆಚ್.ವಿ.ನಾಗೇಶ್ (ಹಾಡ್ಯ) ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದ ಚುನಾವಣಾಧಿಕಾರಿ ಪ್ರಸನ್ನ ದಿವಾಣ್ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ತಾಲೂಕು ಕೃಷಿಕ ಸಮಾಜದ ನಿರ್ದೇಶಕರುಗಳಾದ
ಹೆಚ್.ವಿ.ನಾಗೇಶ್, ಕೆ.ಮಹದೇವ, ಎಸ್.ಎ.ಕೃಷ್ಣಕುಮಾರ, ಎ.ಎನ್.ಅಣ್ಣೇಗೌಡ, ಹೆಚ್.ಎಸ್.ರವಿ, ಎಸ್.ಬಿ.ಪುಟ್ಟೇಗೌಡ, ಎ.ಲಕ್ಷ್ಮೇಗೌಡ, ಹಲಗಪ್ಪ, ಡಿ.ಸಿ.ರಾಮೇಗೌಡ, ಹೆಚ್.ಟಿ.ಸುದರ್ಶನ್ ಅವರುಗಳು ಭಾಗವಹಿಸಿದ್ದರು, ಐದು ಜನ ನಿರ್ದೇಶಕರುಗಳು ಗೈರು ಹಾಜರಾಗಿದ್ದರು ಎಂದು ತಿಳಿಸಿದರು.
“ಚುನಾವಣೆ ಮುಂದೂಡುವಂತೆ ಮನವಿ”: ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರ ಚುನಾವಣೆಗೆ ಸಂಬಂಧಿಸಿದಂತೆ ಏಳು ದಿನಗಳ ಮುಂಚಿತವಾಗಿ ನಿರ್ದೇಶಕರುಗಳಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ತಿಳಿಸದೆ ಏಕಾಏಕಿಯಾಗಿ ಅಧ್ಯಕ್ಷರ ಆಯ್ಕೆಯ ಚುನಾವಣೆಯನ್ನು ನಡೆಸುತ್ತಿದ್ದು ಈ ಚುನಾವಣೆಯನ್ನು ಮುಂದೂಡಿ ಮುಂದಿನ ದಿನಾಂಕದಲ್ಲಿ ಚುನಾವಣೆಯನ್ನು ನಡೆಸಬೇಕು ಇಲ್ಲವಾದಲ್ಲಿ ಇದರ ವಿರುದ್ಧ ನ್ಯಾಯಾಲಯದ ಮೊರೆಹೋಗುವುದಾಗಿ ತಾಲೂಕು ಕೃಷಿಕ ಸಮಾಜದ ನಿರ್ದೇಶಕ ಎಸ್.ಎ.ರವೀಶ್ ಚುನಾವಣೆ ನಡೆಯುವ ಸಂದರ್ಭದಲ್ಲಿ ಚುನಾವಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಘಟನೆ ನಡೆಯಿತು.