ಮಂಡ್ಯ: ನೀರು ಕೊಡುವ ಯೋಗ್ಯತೆ ಇಲ್ಲಂದ್ರೆ ವಿಶೇಷ ಅನುದಾನ ಘೋಷಣೆ ಮಾಡಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತರ ಜೊತೆ ಸೇರಿ ಬಿಜೆಪಿ ದೊಡ್ಡ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಬಿಜೆಪಿ ರಾಜ್ಯ ರೈತ ಮೋರ್ಚದ ಪ್ರಧಾನ ಕಾರ್ಯದರ್ಶಿ ಡಾ.ನವೀನ್ ಎಚ್ಚರಿಕೆ ನೀಡಿದರು.
ಮಂಡ್ಯದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಡಾ.ನವೀನ್, ವಿಸಿ ನಾಲೆ ಕಾಮಗಾರಿ ಬಗ್ಗೆ ರೈತರಿಂದ ಸಾಕಷ್ಟು ದೂರು ಬಂದಿದೆ. ಸರಿಯಾದ ರೀತಿಯಲ್ಲಿ ಕಾಮಗಾರಿ ನಡೆಯುತ್ತಿಲ್ಲ, ಈ ಅವದಿಯಲ್ಲಿ ನೀರು ಕೊಡುವ ಸಾಧ್ಯತೆ ಕಡಿಮೆ ಇದೆ. ರೈತರಿಂದ ದೂರು ಬಂದ ಹಿನ್ನಲೆ ಭೇಟಿ ಕೊಟ್ಟಿದ್ದೇವೆ.ಕಳೆದ ಬಾರಿ ವಿಸಿ ನಾಲೆ ಅಚ್ಚುಕಟ್ಟು ಪ್ರದೇಶದ 1ಲಕ್ಷದ 96 ಸಾವಿರ ಎಕರೆ ಭೂಮಿಗೆ ಬರದ ಕಾರಣ ಹೇಳಿ ನೀರು ಬಿಟ್ಟಿಲ್ಲ. ಅ ಭಾಗದ ರೈತರು ಸಾಕಷ್ಟು ತೊಂದರೆಗೆ ಒಳಗಾಗಿದ್ರು. ಈ ಬಾರಿ ಜೂನ್ ನಲ್ಲಿ ನೀರು ಬಿಡುವ ಬಗ್ಗೆ ರೈತರು ನಿರೀಕ್ಷೆ ಮಾಡಿದ್ರು. ಇನ್ನೂ ಆರು ತಿಂಗಳು ಕಳೆದ್ರೂ ನಾಲೆಗೆ ಇವರು ನೀರು ಬಿಡಲ್ಲ. ಮಂಡ್ಯ ಜಿಲ್ಲೆಯ ರೈತರನ್ನ ಸರ್ಕಾರ ಕಡೆಗಣಿಸಿದೆ ಎಂದು ಆರೋಪಿಸಿದರು.
ನಮ್ಮದೆ ಸರ್ಕಾರ, ಉಸ್ತುವಾರಿ ಮಂತ್ರಿ, ನಮ್ಮ ಸ್ನೇಹಿತರು ನಾಟಿ ವ್ಯಕ್ತಿನೇ ಇಲ್ಲಿ ಕ್ಯಾಂಡಿಡೇಟ್ ಅನ್ನೋ ಮನಸ್ಥಿತಿ ಎದ್ದು ಕಾಣುತ್ತೆ. ವಿಸಿ ನಾಲೆಯ 46 ಕಿ.ಮೀ ಅವೈಜ್ಞಾನಿಕ ಕೆಲಸ ಮಾಡಿದ್ದಾರೆ. ನೀರು ಬಿಡುವ ಜಾಗದಲ್ಲಿ ಸರಿಯಾದ ಕಾಮಗಾರಿ ಮಾಡಿಲ್ಲ. 330 ಕೋಟಿ ಅವೈಜ್ಞಾನಿಕ ಕಾಮಗಾರಿಯಿಂದ ಲಾಸ್ ಆಗುತ್ತೆ. ಕೇಂದ್ರದ ಜೊತೆ ಒಳ್ಳೆಯ ಸಂಬಂಧ ಇಟ್ಟಿಕೊಂಡು ಕೆಲಸ ಮಾಡಬೇಕಿದ್ದ ರಾಜ್ಯ ಸರ್ಕಾರ ದ್ವೇಷ ಸಾದಿಸುತ್ತಿದೆ. ರೈತರಿಗೆ ಭಿತ್ತನೆ ಬೀಜ ಹಾಕಬೇಡಿ ನೀರಿಲ್ಲ ಅಂತಾರೆ. ಸರ್ಕಾರ, ಸಿಎಂ,ಡಿಸಿಎಂ ಗೆ ಮನುಷ್ಯತ್ವ ಇಲ್ಲ. ರೈತರಿಗೆ ಬಂದ ಅನುದಾನವನ್ನ ಸಾಲಕ್ಕೆ ಜಮಾ ಮಾಡ್ತಿದ್ದಾರೆ. ಈ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರ. ಜೂನ್ 15ರೊಳಗೆ ವಿಸಿ ನಾಲೆ ಕಾಮಗಾರಿ ಕಂಪ್ಲೀಟ್ ಆಗಬೇಕು. ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಟ್ಟಿಲ್ಲ. ರೈತರನ್ನ ಉದ್ಯೋಗ ದಾತರನ್ನ ಮಾಡ್ತಿಲ್ಲ, ಬಿಜೆಪಿಯ ಯೋಜನೆಗಳ ಕಾಂಗ್ರೆಸ್ ತಡೆದಿದೆ. ಒಂದು ವರ್ಷದ ಸತ್ಕಾರ್ಯವನ್ನ ನೆನೆಯಬೇಕಾ ? ಶಾಸಕರು ಎಷ್ಟು ಶಾಲೆಗಳನ್ನ ಮಾಡಿದ್ದಾರೆ, ಅಭಿವೃದ್ಧಿ ಕೆಲಸ ಮಾಡಿದ್ದಾರೆ ? ಅವರ ಅನುದಾನದಿಂದ ಎಷ್ಟು ಅನುದಾನ ಬಂದಿದೆ? ಅವರು ಮಾಡಿರುವ ಕೆಲಸವನ್ನ ಜನರ ಮುಂದೆ ಇಡಲಿ ಎಂದು ಸವಾಲು ಹಾಕಿದರು.