Friday, April 11, 2025
Google search engine

Homeರಾಜ್ಯಸುದ್ದಿಜಾಲಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳ ಪ್ರಕಟ

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2023-24ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳ ಪ್ರಕಟ

ಮೈಸೂರು: ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ 2023-24ನೇ ಸಾಲಿನ ಜೀವಮಾನ ಸಾಧನೆ, ಹಿರಿಯ ಪತ್ರಕರ್ತರು, ಛಾಯಾಗ್ರಹಕರು ಸೇರಿದಂತೆ ವರ್ಷದ ಕನ್ನಡ, ಇಂಗ್ಲಿಷ್ ವರದಿಗಳು, ಅತ್ಯುತ್ತಮ ಛಾಯಾಚಿತ್ರ ಹಾಗೂ ವಿದ್ಯುನ್ಮಾನ ವರದಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಪತ್ರಿಕೋದ್ಯಮ ಕ್ಷೇತ್ರದ ಜೀವಮಾನ ಸಾಧನೆ ಪ್ರಶಸ್ತಿ ಪುರಸ್ಕೃತರು

  • ಹಿರಿಯ ಪತ್ರಕರ್ತ, ದಿನ ತಂತಿ ಪತ್ರಿಕೆಯ ಎಂ.ಎನ್.ಕಿರಣ್ ಕುಮಾರ್
  • ವರ್ಷದ ಹಿರಿಯ ಗ್ರಾಮಾಂತರ ಪತ್ರಕರ್ತ ಪ್ರಶಸ್ತಿಗೆ ಸಾಲಿಗ್ರಾಮ ಯಶವಂತ್ ( ಪ್ರಜಾವಾಣಿ ಹಿರಿಯ ವರದಿಗಾರರು )
  • ಹಿರಿಯ ಸುದ್ಧಿ ಸಂಪಾದಕ ಪ್ರಶಸ್ತಿಗೆ ಕೆ.ಎನ್. ನಾಗಸುಂದ್ರಪ್ಪ ( ವರ್ತಮಾನ್ ದಿನಪತ್ರಿಕೆ ಸುದ್ಧಿ ಸಂಪಾದಕರು)
  • ಹಿರಿಯ ಛಾಯಾಗ್ರಾಹಕ ಪ್ರಶಸ್ತಿಗೆ ಶ್ರೀರಾಮ್ (ದಿ. ಹಿಂದು ದಿನಪತ್ರಿಕೆ)
  • ದೃಶ್ಯ ಮಾಧ್ಯಮ ಪ್ರಶಸ್ತಿಗೆ ಮಹೇಶ್ ಶ್ರವಣಬೆಳಗೋಳ (ಈ ಟಿವಿ ಭಾರತ್ ಹಿರಿಯ ವರದಿಗಾರ )
  • ದೃಶ್ಯ ಮಾಧ್ಯಮ ಹಿರಿಯ ವಿಡಿಯೋಗ್ರಫರ್ ಪ್ರಶಸ್ತಿಗೆ ನಾಗೇಶ್. ಎಸ್ (ವಿಸ್ತಾರ ಟಿವಿ )

ಉತ್ತಮ ಕನ್ನಡ ವರದಿ ಪ್ರಶಸ್ತಿ ಪುರಸ್ಕೃತರು

  • ಹೆಚ್.ಎಸ್ ಸಚ್ಚಿತ್ (ಪ್ರಜಾವಾಣಿ ಪತ್ರಿಕೆ)
  • ಇಂಗ್ಲೀಷ್ ವರದಿಗೆ ಶಿಲ್ಪಾ.ಪಿ (ಹಿರಿಯ ಪ್ರಧಾನ ವರದಿಗಾರ, ಡೆಕ್ಕನ್ ಹೆರಾಲ್ಡ್)
  • ಉತ್ತಮ ಫೋಟೋಗ್ರ್ರಾಫಿಗೆ ಉದಯ್ ಶಂಕರ್.ಎಸ್ (ಇಂಡಿಯನ್ ಎಕ್ಸ್‌ ಪ್ರೆಸ್ಸ್ ಪತ್ರಿಕೆ)
  • ವಿದ್ಯುನ್ಮಾನ ಮಾಧ್ಯಮದ ವರದಿ ಪ್ರಶಸ್ತಿಗಳಿಗೆ ಜಯಂತ್
  • ರಾಮು‌ (ದೂರದರ್ಶನ)

ಇದೇ ತಿಂಗಳು ಸೆ. 21ರಂದು ನಡೆಯುವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಈ ಮೇಲಿನ ಸಾಧಕರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

RELATED ARTICLES
- Advertisment -
Google search engine

Most Popular