ಗುಂಡ್ಲುಪೇಟೆ: ಗೃಹ ಲಕ್ಷ್ಮೀ ಯೋಜನೆಯಡಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ನೋಂದಣಿಯಾದ ಫಲಾನುಭವಿಗಳಿಗೆ ಈಗಾಗಲೇ ರೂ 2000 ಗಳ ಮಾಸಿಕ ಸಹಾಯಧನವನ್ನು ಪಾವತಿಸಲಾಗಿರುತ್ತದೆ.
ತಾಲ್ಲೂಕಿನಲ್ಲಿ ಕೆಲವು ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸೀಡಿಂಗ್ ಮತ್ತು ರೇಷನ್ ಕಾರ್ಡ್ ಗೆ 2- ಕೆವೈಸಿ ಮಾಡಿಸದೇ ಇರುವ ಪಟ್ಟಿಯನ್ನು ನಿಮ್ಮ ಹತ್ತಿರದ ಅಂಗನವಾಡಿ ಕಾರ್ಯಕರ್ತೆಯರಿಗೆ ಕಳುಹಿಸಲಾಗಿರುತ್ತದೆ. ಈ ಕಾರಣದಿಂದ ಗೃಹ ಲಕ್ಷ್ಮೀ ಯೋಜನೆಯ ಮಾಸಿಕ ರೂ 2000 ಗಳ ಸಹಾಯಧನ ಪಾವತಿಯಾಗಿರುವುದಿಲ್ಲ.
ಇದರ ಪ್ರಯುಕ್ತ ಗೃಹ ಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಂಡ ಸಹಾಯಧನ ಪಡೆಯದೆ ಇರುವ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಸಲ್ಲಿಸಿದ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಸೀಡಿಂಗ್ ಮತ್ತು ರೇಷನ್ ಕಾರ್ಡ್ ಗೆ ಇ- ಕೈ,ವೈಸಿ ಮಾಡಿಸಿ ಮಾಹಿತಿಯನ್ನು ಹಾಗೂ ಹೊಸದಾಗಿ ರೇಷನ್ ಕಾರ್ಡ್ ಮಾಡಿಸಿ ಗೃಹಲಕ್ಷ್ಮೀಗೆ ನೋಂದಣಿಯಾಗದಿದ್ದರೆ ಈ ಮಾಹಿತಿಯನ್ನು ಕೂಡ ತಮ್ಮ ಸಮೀಪದ ಅಂಗನವಾಡಿ ಕಾರ್ಯಕರ್ತೆಯರಿಗೆ ಒದಗಿಸಿದಲ್ಲಿ ಗೃಹಲಕ್ಷ್ಮೀ ಯೋಜನೆಯ ಸಹಾಯಧನ ಪಾವತಿಸಲು ಕ್ರಮವಹಿಸಲಾಗುವುದೆಂದು ಗುಂಡ್ಲುಪೇಟೆ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹೇಮಾವತಿ ರವರು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಣೆಯನ್ನು ಹೊರಡಿಸಿರುತ್ತಾರೆ.