Sunday, April 20, 2025
Google search engine

Homeಸ್ಥಳೀಯವಾರ್ಷಿಕಉದ್ಯಮಒಡಂಬಡಿಕೆ ಸಮಾವೇಶ

ವಾರ್ಷಿಕಉದ್ಯಮಒಡಂಬಡಿಕೆ ಸಮಾವೇಶ

ಮೈಸೂರು:ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯವು ಎರಡು ದಿನದ ವಾರ್ಷಿಕ ಉದ್ಯಮ ಒಡಂಬಡಿಕೆ ಸಮಾವೇಶ-೨೦೨೪ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಎರಡು ದಿನದಕಾರ್ಯಕ್ರಮದಲ್ಲಿ ೨೫ ಉದ್ಯಮಿಗಳು ಹಾಗೂ ೪ವಿದೇಶಿ ವಿಶ್ವವಿದ್ಯಾನಿಲಯದವರು ಸೇರಿದಂತೆ ಹಲವಾರುಗಣ್ಯರು ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಮೆರುಗುತಂದಿತು.

ಈ ಕಾರ್ಯಕ್ರಮದಲ್ಲಿ ಸ್ನೈಡರ್‌ಎಲೆಕ್ಟ್ರಿಕ್ ಪ್ರೈವೇಟ್ ಲಿಮಿಟೆಡ್, ಸಿಎಸ್‌ಟಿಇಪಿ ದಕ್ಷಿಣ ಇಲಿನಾಯ್ ವಿಶ್ವವಿದ್ಯಾನಿಲಯ, ಕಾರ್ಬನ್‌ಡೇಲ್, ಯುಎಸ್‌ಎ ಈ ೩ಒಡಂಬಡಿಕೆಗಳಿಗೆ ರುಜು ಮಾಡಿದ್ದುಹೆಮ್ಮೆಯ ಸಂಗತಿ. ಈ ಕ್ರಿಯಾತ್ಮಕ ವೇದಿಕೆಯಾದ ಶೈಕ್ಷಣಿಕಉದ್ಯಮಎಂಓಯು ಸಮಾವೇಶವುಎಲ್ಲಾ ಪ್ರಕಾಶಕರನ್ನು ಯಶಸ್ವಿಯಾಗಿ ಒಗ್ಗೂಡಿಸಿದರು. ಅವರು, ಮರ್ಸಿಡೀಸ್ ಬೆಂಝ್ ಸಂಶೋಧನೆ ಮತ್ತುಅಭಿವೃದ್ಧಿ ಭಾರತ, ಡೆಲಾಯಿಟ್, ಲಾರ್ಸನ್ ಮತ್ತುಟ್ಯೂರ್ಬೊತಂತ್ರಜ್ಞಾನ ಸರ್ವಿಸ್,ಇನ್ಫೊಸೊಸ್ ಲಿಮಿಟೆಡ್, ಹರ್ಮನ್‌ಅಂತರಾಷ್ಟ್ರೀಯ,ತೇಜಸ್ ನೆಟ್‌ವರ್ಕ್,ಟೊಯೋಡ ಗೊಸೈ, ಸಿಎಸ್‌ಟಿಇಪಿ, ಅಟೋಯೋಸ್, ಆಂಥೆಮ್ ಬಯೋಸೈನ್ಸ್, ಸ್ನೈಡರ್‌ಎಲೆಕ್ಟ್ರಿಕ್, ಜೆಕೆಟೈರ್‍ಸ್, ಹೊಕಾಯಿಡೊ ವಿಶ್ವದ್ಯಾನಿಲಯ, ಜಪಾನ್, ಏಷ್ಯಾ ಫೆಸಿಫಿಕ್ ವಿಶ್ವವಿದ್ಯಾನಿಲಯ, ಮಲೇಷಿಯಾ, ಟಾಟಾಕನ್ಸಲ್‌ಟೆನ್ಸಿ ಸರ್ವೀಸಸ್, ಬೋರುಕಎಕ್ಷ್‌ಟ್ರ್ರೂಷನ್‌ಪ್ರೈವೇಟ್ ಲಿಮಿಟೆಡ್, ಎಲ್‌ಟಿಐ ಮೈಂಡ್‌ಟ್ರೀ, ಕರ್ನಾಟಕರಾಜ್ಯ ಪರಿಷತ್ತು, ವಿಜ್ಞಾನ ಮತ್ತುತಂತ್ರಜ್ಞಾನ, ಎಚ್ ಯುಡಿಸಿಓ, ಬೆಂಗಳೂರು, ಸಿಎನ್‌ಇಎಸ್‌ಟಿ, ಕ್ರೋಮ್ಯಾಟೊಜನ್, ಸ್ಯುಲೆಟ್ ಪ್ಯಕ್ಯಾರ್ಡ್‌ಎನ್ಟರ್ ಪ್ರೈಸ್, ಕಾನ್ಫೆಡರೇಷನ್‌ಭಾರತಉದ್ಯಮಇತ್ಯಾದಿ ಒಟ್ಟಿಗೆ ಸೇರಿ ಸವಾಲುಗಳನ್ನು ಮತ್ತು ಅವಕಾಶಗಳ ಮಾಹಿತಿಗಳನ್ನು ಮನವರಿಕೆ ಮಾಡಿದರು.

ಶಶಿಧರ್ ಡೋಂಗ್ರೆ, ಗ್ಲೋಬಲ್ ಮುಖ್ಯಸ್ಥರು, ಇವರುಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದು. ತಮ್ಮ ಭಾಷಣದಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿ ಶಿಕ್ಷಣದ ಮಹತ್ವ ಹಾಗೂ ಇಂದಿನ ಶಿಕ್ಷಣ ವ್ಯವಸ್ಥೆ, ಉದ್ಯಮಗಳ ಮೇಲೆ ಯಾವರೀತಿ ಪರಿಣಾಮ ಬೀರುತ್ತಿದೆ. ಮುಖ್ಯವಾಗಿ ಇದರ ಉಪಯೋಗ ಪಡೆದು ಮುಂದಿನ ಪೀಳಿಗೆ ಯಾವರೀತಿ ಸಬಲರಾಗಬೇಕುಎಂಬುದನ್ನು ತಿಳಿಸಿದರು.

ಕೆ.ಎಸ್. ಸುಂದರ್, ಇನ್ಫೊಸಿಸ್‌ನ ಕಂಪನಿಯಉಪನಿದೇಶಕರುಕಾರ್ಯಕ್ರಮದಉಪಾಧ್ಯಕ್ಷತೆಯನ್ನು ವಹಿಸಿದ್ದರು.ಇವರು ಮಾತನಾಡಿವಿದ್ಯಾರ್ಥಿಗಳನ್ನು ಇಂದಿನ ಸ್ಪರ್ಧಾತ್ಮಕಯುಗದಲ್ಲಿಯಾವುದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಹೆಚ್ಚು ಸಮರ್ಥರನ್ನಾಗಿ ಮಾಡುವ ದಿಸೆಯಲ್ಲಿ ಈಒಡಂಬಡಿಕೆಯು ಅನಿವಾರ್ಯವಾಗಿದೆಎಂದರು.ಉದ್ಯಮದ ನಿರೀಕ್ಷೆಗಳ ಬಗ್ಗೆ ಉಲ್ಲೇಖಿಸಿ ಮಾತನಾಡಿದಅವರು ಉದ್ಯಮಗಳ ಪ್ರಾಮುಖ್ಯತೆಗಳ ಜೊತೆಗೆ ಪ್ರಾಯೋಗಿಕಆಧಾರಿತ ಪಠ್ಯಕ್ರಮಗಳ ಬದಲಾವಣೆಗಳ ಬಗ್ಗೆ ಛಾಪು ಮೂಡಿಸಿದರು.

ಈ ಕಾರ್ಯಕ್ರಮಕ್ಕೆಜೊತೆಗೂಡಿದ ಡಾ.ಸುರೇಶ್, ನಿರ್ದೇಶಕರು, ತಾಂತ್ರಿಕ ಶಿಕ್ಷಣ, ಜೆಎಸ್‌ಎಸ್, ಎಂವಿಪಿ ಇವರು ಮಾತನಾಡಿ ಪ್ರಾರಂಭಿಕ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆ ಕೇವಲ ಇಂಜಿನಿಯರು ಹಾಗೂ ಪ್ರಾಧ್ಯಾಪಕರುಗಳನ್ನು ತಯಾರಿಸುವ ವ್ಯವಸ್ಥೆಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದಿನ ಬದಲಾಗುತ್ತಿರುವತಾಂತ್ರಿಕತೆಯ ಕಾಲಮಾನದಲ್ಲಿಇಂಜಿನಿಯರಿಂಗ್‌ಕ್ಷೇತ್ರದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರುಗಳು ಹೊರಜಗತ್ತಿನಎಲ್ಲಾ ಆಯಾಮಗಳಲ್ಲಿ ತಮ್ಮ ನೆಲೆ ಕಂಡುಕೊಳ್ಳಲು ತಾಂತ್ರಿಕತೆಯಲ್ಲಿ ಹೊಸತನವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆಯಿದೆ.

ಈ ದಿಸೆಯಲ್ಲಿ ಇಂತಹ ಒಡಂಬಡಿಕೆಯು ಗುರುತರಜವಾಬ್ಧಾರಿಗೆ ಕಾರಣವಾಗಿದೆ ಎಂದರು. ಮುಂದುವರೆದು ತಂತ್ರಜ್ಞಾನ ಮತ್ತುಕೃತಕ ಬುದ್ಧಿಮತ್ತೆಅದರ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಅವರು ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಭಾರತದಅಭಿವೃದ್ಧಿಯಲ್ಲಿತಂತ್ರಜ್ಞಾನ ಮತ್ತುಅಂತರ್ಜಾಲ ಯಾವರೀತಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದರು.ವಿದ್ಯಾರ್ಥಿಗಳು ಹೊಸ ಹೊಸ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳಲು ಜೆಎಸ್‌ಎಸ್ ವಿಜ್ಞಾನ ಮತ್ತುತಂತ್ರಜ್ಞಾನ ವಿವಿಯು ವಹಿಸುತ್ತಿರುವ ಶ್ರಮವನ್ನು ವಿಶ್ಲೇಷಿಸಿದ ಜೆಎಸ್‌ಎಸ್ ಮಹಾವಿದ್ಯಾಪೀಠದಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜೆ. ಬೆಟ್‌ಸೂರ್ ಮಠ್‌ಅವರು ನೂತನತಂತ್ರಜ್ಞಾನದತೀವ್ರತೆಯ ಬದಲಾವಣೆಯನ್ನುಉದ್ಯಮದ ಅಗತ್ಯಗಳೊಂದಿಗೆ ಪರಸ್ಪರಜೋಡಿಸುವಅಗತ್ಯತೆಯನ್ನುಒತ್ತಿ ಹೇಳಿದರು.

ಈ ಕಾರ್ಯಕ್ರಮದಲ್ಲಿ ಹಲವಾರು ನುರಿತಅನುಭವಿಗಳು, ಸಂಪನ್ಮೂಲ ವ್ಯಕ್ತಿಗಳು ಮತ್ತು ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಹಲವಾರು ಮುಖ್ಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಬಹುಮುಖ್ಯವಾಗಿ ಇಂದಿನ ಕಂಪನಿಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಮುಂದೆ ಬರುವ ಅವಕಾಶಗಳ ಬಗ್ಗೆ ಅರಿವು ಮೂಡಿಸಲಾಯಿತು.

ಡಾ.ಸಿ.ಜಿ. ಬೆಟ್‌ಸೂರ್‌ಮಠ್, ಕಾರ್ಯನಿರ್ವಾಹಕ ಕಾರ್ಯದರ್ಶಿ,ಜೆಎಸ್‌ಎಸ್ ಮಹಾವಿದ್ಯಾಪೀಠ, ಡಾ.ಬಿ.ಸುರೇಶ್,ನಿರ್ದೇಶಕರು, ತಾಂತ್ರಿಕ ಶಿಕ್ಷಣ, ಜೆಎಸ್‌ಎಸ್, ಮಹಾವಿದ್ಯಾಪೀಠ, ಡಾ. ಎ.ಎನ್. ಸಂತೋಷ್‌ಕುಮಾರ್, ಉಪಕುಲಪತಿಗಳು, ಜೆಎಸ್‌ಎಸ್‌ಎಸ್‌ಟಿಯು,ಡಾ. ಎಸ್.ಎ. ಧನರಾಜ್,ಕುಲಸಚಿವರು, ಜೆಎಸ್‌ಎಸ್‌ಎಸ್‌ಟಿಯು, ಪ್ರಾಂಶುಪಾಲರಾದ ಡಾ.ಸಿ.ಎನ್ ನಟರಾಜು, ಡಾ. ವಾಣಿಶ್ರೀ ಅರಣ್, ಡಾ.ಎಂ.ಪ್ರದೀಪ್‌ ಅವರುಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿದ್ದರು.

RELATED ARTICLES
- Advertisment -
Google search engine

Most Popular