ಹೊಸೂರು : ಕೆ.ಆರ್.ನಗರ ತಾಲೂಕಿನ ಹಂಪಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರುಗಳ ವಾರ್ಷಿಕ ಮಹಾಸಭೆಯನ್ನು ಮಂಗಳವಾರ ಸಂಘದ ಆಡಳಿತ ಭವನದಲ್ಲಿ ನಡೆಸಲಾಯಿತು.
ಅಧ್ಯಕ್ಷ ಹೆಚ್.ಪಿ.ಪ್ರಶಾಂತ್ ಅನಾರೋಗ್ಯದಿಂದ ಗೈರು ಹಾಜರಾಗಿದ್ದರು. ಉಪಾಧ್ಯಕ್ಷ ಸೀನಯ್ಯರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಜಯರಾಜ ಮಾತನಾಡಿ, ಸಂಘ ೧,೨೬,೭೩೧ ರೂ ನಿವ್ವಳ ಲಾಭದಲ್ಲಿದ್ದು, ಆಡಳಿತ ಮಂಡಳಿಯ ಸಹಕಾರದಿಂದ ಈ ಬಾರಿ ಇನ್ನಷ್ಟು ಲಾಭ ಗಳಿಸಲು ಶ್ರಮಿಸಲಾಗುತ್ತದೆ ಎಂದು ಹೇಳಿದರು.
ಸಂಘಕ್ಕೆ ಹಂಪಾಪುರ, ಸನ್ಯಾಸಿಪುರ, ಬಾಲೂರು, ಮಂಚನಹಳ್ಳಿ, ಬಡಕನಕೊಪ್ಪಲು, ಬಾಲೂರುಹೊಸಕೊಪ್ಪಲು ಗ್ರಾಮಗಳು ಒಳಪಟ್ಟಿದ್ದು, ೧೦೬೨ ಮಂದಿ ಷೇರುದಾರರು ಇದ್ದಾರೆ. ೯೩.೦೫ ಲಕ್ಷ ರೂ ಷೇರು ಬಂಡವಾಳ ಹೊಂದಿದ್ದು, ೨೩೫ ಮಂದಿ ಸದಸ್ಯರಿಗೆ ಕೆ.ಸಿ.ಸಿ ಸಾಲ ೨೨೧.೦೫ ಲಕ್ಷ ರೂ ಸಾಲ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಂಘದ ವ್ಯಾಪ್ತಿಯಲ್ಲಿ ೭೭ ಮಹಿಳಾ ಸ್ವ-ಸಹಾಯ ಸಂಘಗಳು ರಚನೆಯಾಗಿದ್ದು ಕೆಲವು ಸಂಘಗಳಿಗೆ ೨೪ ಲಕ್ಷ ರೂ ಲಿಂಕೇಜ್ ಸಾಲ ನೀಡಲಾಗಿದ್ದು, ಈ ಬಾರಿ ಹೈನುಗಾರಿಕೆ, ಮಧ್ಯಮಾವಧಿ ಸಾಲ ನೀಡುವುದರ ಜತೆಗೆ ಗೊಬ್ಬರ ಮಾರಾಟ ಮಾಡಿ ಲಾಭ ಗಳಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಬಾಲಕೃಷ್ಣ, ಸುಬ್ಬೇಗೌಡ, ಮೀನ್ ನಾಗರಾಜು, ರಮೇಶ್, ಗೋವಿಂದೇಗೌಡ, ನಾಗೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಮಲ್ಲಿಕಾರ್ಜುನ್ ಸೇರಿದಂತೆ ಇತರ ಮಂದಿ ಹಾಜರಿದ್ದು ಸಂಘದ ಅಭಿವೃದ್ದಿ ಪೂರಕವಾದ ಸಲಹೆ ಸೂಚನೆ ನೀಡಿದರು. ನಿರ್ದೇಶಕರಾದ ಎಂ.ಎಸ್.ಅನಂತು, ದಾಸೇಗೌಡ, ಸುಬ್ಬೇಗೌಡ, ಮಂಜುನಾಥ್, ಸಿದ್ದಮ್ಮ, ಕುಚೇಲ, ಹೆಚ್.ಎಸ್.ಮಂಜುನಾಥ್, ರತ್ನಮ್ಮ, ಹೆಚ್.ಆರ್.ಗಿರೀಶ್, ದೇವರಾಜು, ಸಿಬ್ಬಂದಿ ಹೆಚ್.ಸಿ.ಉಮೇಶ್ ಇದ್ದರು.