ಕನಕಪುರ: ತಾಲ್ಲೂಕಿನ ಸಾತನೂರು ರೈತರ ಸೇವಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಮಂಗಳವಾರ ಸಂಘದ ಆವರಣದಲ್ಲಿ ನಡೆಯಿತು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಅಭಿಷೇಕ್ ಸಂಘದ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿ, ಸಂಘಕ್ಕೆ 23-24 ನೇ ಸಾಲಿನಲ್ಲಿ 14 ಲಕ್ಷ ಲಾಭಾಂಶ ಬಂದಿದೆ ಎಂದು ಸಭೆಗೆ ತಿಳಿಸಿದರು.
ಸಂಘದ ಅಧ್ಯಕ್ಷ ರೇಣುಕಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಸಭೆಯನ್ನು ನಡೆಸಿಕೊಟ್ಟರು, ಉಪಾಧ್ಯಕ್ಷೆ ಲಕ್ಷ್ಮಮ್ಮ ನಿರ್ದೇಶಕರಾದ ಎಂ.ಮಹದೇವಸ್ವಾಮಿ, ವಿ.ಎಲ್.ರಾಮಲಿಂಗೇಗೌಡ, ಎಸ್.ರವಿ, ಕೆ.ಟಿ.ರಮೇಶ್, ಸುರೇಶ್ ಬಾಬು, ಚಿಕ್ಕ ನಾಗಣ್ಣ, ಮರಿಯಪ್ಪ, ಹೊಂಬಾಳಮ್ಮ, ಮುನಿಯಮ್ಮ, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಆನಂದ್ ಉಪಸ್ಥಿತರಿದ್ದರು.
ಸ್ಥಳೀಯ ಮುಖಂಡರಾದ ಎಸ್.ಎಸ್.ಶಂಕರ್, ರಾಮಣ್ಣ, ನಟೇಶ್, ನಾಗರಾಜು, ಸಂಘದ ನೌಕರರಾದ ಯೋಗೇಶ್.ಆರ್, ಪ್ರಭುಸ್ವಾಮಿ, ಸುರೇಶ್.ಎಸ್.ಕೆ ಸೇರಿದಂತೆ ರೈತರು ಸಭೆಯಲ್ಲಿ ಪಾಲ್ಗೊಂಡಿದ್ದರು.