Friday, April 18, 2025
Google search engine

Homeರಾಜ್ಯಸುದ್ದಿಜಾಲಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಮೈಸೂರು: ಒಂದು ಸಹಕಾರ ಸಂಘವು ಯಶಸ್ವಿಯಾಗಲು ಸದಸ್ಯರ ಪಾತ್ರ ಅಪಾರ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ. ದೀಪಕ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ವತಿಯಿಂದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಆವರಣದಲ್ಲಿ ಆಯೋಜಿಸಲಾಗಿದ್ದ ಏಳನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.

31ಲಕ್ಷದ 15 ಸಾವಿರ ರೂ ಸಾಲವನ್ನು ಸದಸ್ಯರಿಗೆ ನೀಡಿ ಶೇ 98ರಷ್ಟು ವಸೂಲಾತಿಯನ್ನು ಮಾಡಿದ್ದೇವೆ, 126ಮಂದಿ 7 ಲಕ್ಷಕ್ಕೂ ಹೆಚ್ಚಿನ ಹಣವನ್ನು ಆರ್.ಡಿ. ಇಟ್ಟಿದ್ದಾರೆ. 51 ಮಂದಿಗೆ ಯಶಸ್ವಿನಿ ಯೋಜನೆಗೆ ಒಳಪಡಿಸಲಾಗಿದೆ. ಇಬ್ಬರು ಪತ್ರಕರ್ತರು ನಿಧನರಾದ ಸಂದರ್ಭದಲ್ಲಿ ತಲಾ ಐದು ಸಾವಿರ ಹಣವನ್ನು ಸಹಾಯಧನದ ರೂಪದಲ್ಲಿ ನೀಡಲಾಯಿತು. ಸದಸ್ಯರನ್ನು ಹೆಚ್ಚು ಮಾಡುವ ದೃಷ್ಠಿಯಿಂದ ಸದಸ್ಯತ್ವ ಅಭಿಯಾನ ಮಾಡಲಾಗುತ್ತಿದೆ.

ಸಹಕಾರ ಸಂಘಗಳು ಆರ್ಥಿಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ, ಮುಂದೆಯೂ ಸಹ ಚಟುವಟಿಕೆಗಳು ಉತ್ತಮ ರೀತಿಯಲ್ಲಿ ಮಾಡಿಕೊಂಡು ಹೋಗಲಾಗುವುದು ಎಂದು ತಿಳಿಸಿದರು. ನಮ್ಮ ಬೈಲಾವನ್ನು ಒಪ್ಪಿ ವಿಜಯಪುರ, ಹಾಸನ ಮತ್ತು ಚಿಕ್ಕಮಗಳೂರಿನ ಜಿಲ್ಲಾ ಸಂಘಗಳನ್ನು ಸ್ಥಾಪಿಸಲಾಗಿದೆ ಎಂದರು.

ಕಾರ್ಯದರ್ಶಿ ಉಷಾ ಮೋಹನ್ ವರದಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಉದ್ಯಮಿ ಅಶ್ವಿನ್ ಪಾಳ್ಯೇಗಾರ್ ಅವರಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉದ್ಯಮಿ ಅಶ್ವಿನ್ ಪಾಳ್ಯೇಗಾರ್, ಸಂಘದ ಉಪಾಧ್ಯಕ್ಷ ನಟರಾಜು, ನಿರ್ದೇಶಕರುಗಳಾದ ಪ್ರಗತಿ ಗೋಪಾಲಕೃಷ್ಣ, ದಿನೇಶ್ ಕುಮಾರ್, ರಾಘವೇಂದ್ರ, ಮುಕುಂದ, ಸುರೇಶ್, ಮೋಹನ್ ಹುಲ್ಲಳ್ಳಿ, ಮಂಜು ಬೀಚನಹಳ್ಳಿ, ಮಹೇಶ್, ಜಯಶಂಕರಮೂರ್ತಿ, ನಾಗೇಂದ್ರ ಕುಮಾರ್, ದಾಸೇಗೌಡ, ಯಶವಂತ್, ಜ್ಯೋತಿ ಜಯಸೇನ , ಶಿಲ್ಪಶ್ರೀ ಕೆ.ಎನ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ‌‌ ರಾಘವೇಂದ್ರ, ಸದಸ್ಯರುಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular