ಪಿರಿಯಾಪಟ್ಟಣ: ತಾಲ್ಲೂಕಿನ ನೆಲ ಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದ 2022 – 23ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷರಾದ ಎಚ್.ಜಿ ಶಿವಶಂಕರ್ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕಿನ ಕುಂದನಹಳ್ಳಿ ಸರ್ಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷ ಎಚ್.ಜಿ ಶಿವಶಂಕರ್ ಅವರು ಮಾತನಾಡಿ ಗ್ರಾಮೀಣ ಭಾಗದ ರೈತರ ಅಭಿವೃದ್ಧಿಗಾಗಿ ಮೈರಾಡ ಸಂಸ್ಥೆಯ ಸಹಕಾರದೊಂದಿಗೆ ತಾಲೂಕಿನಲ್ಲಿ ಹುಟ್ಟಿಕೊಂಡ ನೆಲ ಜಲ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘ ತಾಲೂಕಿನಾದ್ಯಂತ ಸದಸ್ಯರನ್ನು ಹೊಂದಿದ್ದು ಕೆರೆಕಟ್ಟೆಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ರೈತರ ಅಭಿವೃದ್ಧಿಗಾಗಿ ಹಲವು ನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ಮೈಕ್ಯಾಪ್ಸ್ ಮುಖ್ಯಸ್ಥರಾದ ರಾಜಪ್ಪ ಅವರು ಮಾತನಾಡಿ ನಮ್ಮ ನೆಲ ಜಲವನ್ನು ಸಂರಕ್ಷಿಸುವ ಉದ್ದೇಶದಿಂದ ಸ್ಥಳೀಯವಾಗಿ ಸಹಕಾರಿ ಸಂಘ ತೆರೆದು ರೈತರ ಅಭಿವೃದ್ಧಿಗಾಗಿ ಹಾಗೂ ಜಾನುವಾರುಗಳ ಬಳಕೆಗಾಗಿ ಕೆರೆಕಟ್ಟೆಗಳನ್ನು ಸಂರಕ್ಷಿಸಲಾಗುತ್ತಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಸದಸ್ಯರನ್ನು ಹೊಂದುವ ಮೂಲಕ ಸಹಕಾರಿ ಸಂಘ ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭ ಕೋರಿದರು.
ಈ ಸಂದರ್ಭ ಉಪಾಧ್ಯಕ್ಷ ಕೆ.ಎಸ್ ಲೋಕಪಾಲಯ್ಯ, ನಿರ್ದೇಶಕರಾದ ಶಿವಸ್ವಾಮಿ, ಕೆ.ಬಿ ಶಿವಕುಮಾರಸ್ವಾಮಿ, ಎಂ.ಎಲ್ ನವೀನ್, ಡಿ.ಟಿ ಸತೀಶ್, ಎ.ಕುಮಾರ್, ಕೆ.ಕೃಷ್ಣೇಗೌಡ, ಎ.ಸಿ ಧರಣೆಶಪ್ಪ, ಕೆ.ವಿ ಆನಂದ್, ವೆಂಕಟೇಶ್, ಎ.ಟಿ ಮಂಜುನಾಯಕ, ಇಂದಿರಾ, ಎಸ್.ಕೆ ಜ್ಯೋತಿ, ಹೆಚ್.ಎ ವೆಂಕಟೇಶ್, ಸಿಈಓ ಎನ್.ಹರೀಶ್ ಹಾಗೂ ಶೇರುದಾರ ಸದಸ್ಯರು ಇದ್ದರು.
