ಮೈಸೂರು: ಧನಗಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ೨೦೨೩-೨೪ನೇ ಸಾಲಿನಲ್ಲಿ ೪,೩೮,೨೬೬ ಲಕ್ಷರೂ. ಆದಾಯ ಬಂದಿದೆಎಂದು ಸಂಘದ ಅಧ್ಯಕ್ಷ ಬಿ. ಗುರುಸ್ವಾಮಿ ತಿಳಿಸಿದರು.
ಮೈಸೂರುತಾಲ್ಲೂಕು ಧನಗಹಳ್ಳಿ ಪ್ರಾಥಮಿ ಕೃಷಿ ಪತ್ತಿನ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದಅವರು ಸಂಘ ೧೯೭೬ರಲ್ಲಿ ಪ್ರಾರಂಭವಾಗಿದ್ದು, ೧೯೨೮ ಸದಸ್ಯರಿದ್ದಾರೆ. ಸಂಘದಿಂದ ೫೩೪ ಜನರೈತರಿಗೆ ೬ ಕೋಟಿ ೭ ಲಕ್ಷದ ೧೪ ಸಾವಿರರೂ. ಸಾಲ ನೀಡಲಾಗಿದೆ. ಸಂಘದಲ್ಲಿ ೮೨೦ ರೇಷನ್ ಕಾರ್ಡ್‌ಗಳಿವೆ ಎಂದಅವರುರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡಿದರೆ ೦% ಸಾಲ ಸಿಗುತ್ತದೆ. ಇಲ್ಲದಿದ್ದರೆ ಶೇ. ೧೪% ಬಡ್ಡಿಕಟ್ಟಬೇಕಾಗುತ್ತದೆ. ಆದ್ದರಿಂದರೈತರು ನಿಗಧಿತ ಸಮಯದಲ್ಲಿ ಸಾಲ ಮರುಪಾವತಿಸಬೇಕು. ಮುಂದಿನ ೧೫ ದಿನದಲ್ಲಿರೈತರಿಗೆ ಹೊಸ ಸಾಲ ಕೊಡಿಸಲುಕ್ರಮ ಕೈಗೊಳ್ಳಲಾಗುವುದು. ಸಂಘದ ಹೊಸ ಕಟ್ಟಡದಉದ್ಘಾಟನೆಯನ್ನುದಸರಾ ಕಳೆದ ಮೇಲೆ ಮಾಡಲಾಗುವುದುಎಂದರು.
ಸಭೆಯಲ್ಲಿ ನಿರ್ದೇಶಕರುಗಳಾದ ಎಸ್. ಬಸಪ್ಪ, ಮಾದನಾಯ್ಕ, ಜವರೇಗೌಡ, ಬಸವೇಗೌಡ, ಜಿ.ಎ. ರಾಜೇಗೌಡ, ಚಿಕ್ಕಣ್ಣ, ಬಿ. ಕಾಳಲಿಂಗೇಗೌಡ, ಸಿದ್ದರಾಜು, ಕೃಷ್ಣಮೂರ್ತಿ, ಸಿದ್ದಮ್ಮ, ತಿಮ್ಮಮ್ಮ, ಎಂ. ಗಿರೀಶ್ ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಾಹಕಎಸ್.ಎಂ. ಕೃಷ್ಣ, ಸಿಬ್ಬಂದಿಗಳಾದ ಸಿ. ಮಾಲೇಗೌಡ, ರವಿಕುಮಾರ್, ಗೀತಾ ಹಾಜರಿದ್ದರು.