ಪಿರಿಯಾಪಟ್ಟಣ: ಪಟ್ಟಣದ ಶ್ರೀ ಕನಕ ಸಮುದಾಯ ಭವನದಲ್ಲಿ ಶ್ರೀ ಕನಕ ಅಭಿವೃದ್ಧಿ ಸಹಕಾರ ಸಂಘ ನಿಯಮಿತದ 2022 – 23 ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ದೊರೆಕೆರೆ ನಾಗೇಂದ್ರ ಅಧ್ಯಕ್ಷತೆಯಲ್ಲಿ ನಡೆಯಿತು.
ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಅಧ್ಯಕ್ಷ ದೊರೆಕೆರೆ ನಾಗೇಂದ್ರ ಅವರು ಮಾತನಾಡಿ ತಾಲೂಕಿನಲ್ಲಿ ಕುರುಬ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿ ಹಿತ ದೃಷ್ಟಿಯಿಂದ ಸಮಾಜದ ಹಿರಿಯರ ಮಾರ್ಗದರ್ಶನದಲ್ಲಿ ಕಳೆದೆರಡು ವರ್ಷಗಳ ಹಿಂದೆ ಪ್ರಾರಂಭವಾದ ಸಹಕಾರಿ ಸಂಘ ಪ್ರಸ್ತುತ 75 ಸಾವಿರ ರುಾ ಲಾಭ ಗಳಿಸಿದ್ದು ಮುಂಬರುವ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುರುಬ ಸಮಾಜದ ತಾಲೂಕು ಅಧ್ಯಕ್ಷರಾದ ಟಿ.ಡಿ ಗಣೇಶ್ ಅವರು ಮಾತನಾಡಿ ಸಮಾಜದ ಅಭಿವೃದ್ಧಿ ಉದ್ದೇಶದಿಂದ ಪಕ್ಷಾತೀತವಾಗಿ ಸಹಕಾರಿ ಸಂಘ ಸ್ಥಾಪಿಸಿದ್ದು ಯಾವುದೇ ಕಾರ್ಯಕಾರಿ ಮಂಡಳಿ ಅಧಿಕಾರಕ್ಕೆ ಬಂದರು ಅವರಿಗೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಿದಾಗ ಮಾತ್ರ ಹೆಚ್ಚಿನ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ, ಮುಂಬರುವ ದಿನಗಳಲ್ಲಿ ಸಂಘ ಮತ್ತಷ್ಟು ಬಲಿಷ್ಠವಾಗಿ ಸಂಘಟನೆ ಮತ್ತು ಅಭಿವೃದ್ಧಿ ಹೊಂದಲು ಸಮಾಜದ ಪ್ರತಿಯೊಬ್ಬರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕೋರಿದರು.
ಸಂಘದ ನಗದು ಗುಮಾಸ್ತರಾದ ಜಯರಾಮ್ ವಾರ್ಷಿಕ ವರದಿ ಮಂಡಿಸಿದರು, ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಗಣೇಶ್, ನಿರ್ದೇಶಕರಾದ ಚಿಕ್ಕೇಗೌಡ, ಎನ್.ಎಸ್ ಮಹದೇವ್, ಕೆ.ಟಿ ಮಹದೇವ್, ಕೆ.ಎಂ ಲಕ್ಷ್ಮಣ್, ಮಂಜುಳಾ, ಹೆಚ್.ಎನ್ ಲೋಹಿತ್, ಸಿಇಒ ನಂಜುಂಡೇಗೌಡ ಹಾಗೂ ಷೇರುದಾರ ಸದಸ್ಯರು ಇದ್ದರು.
