ಬಾಗಲಕೋಟೆ : ಲೋಕಸಭೆ ಕಲಾಪದ ವೇಳೆ ಹೊಗೆ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಆರೋಪಿ ಮನೋರಂಜನ್ ಸಂಪರ್ಕದಲ್ಲಿದ್ದ ಬಾಗಲಕೋಟೆ ನಿವೃತ್ತ ಡಿವೈಎಸ್ ಪಿ ಮಗ ಸಾಯಿಕೃಷ್ಣ ಎಂಬಾತನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಾಯಿಕೃಷ್ಣ ಆರೋಪಿ ಮನೋರಂಜನ್ ಸ್ನೇಹಿತನಾಗಿದ್ದು, ಬೆಂಗಳೂರಿನ ಬಿಐಟಿ ಇಂಜಿನಿಯರಿಂಗ್ ಕಾಲೇಜುನಲ್ಲಿ ಸಹಪಾಠಿಯಾಗಿದ್ದನಂತೆ.
ಅಲ್ಲದೇ, ಮನೋರಂಜನ್ ಮತ್ತು ಸಾಯಿಕೃಷ್ಣ ೨೦೦೮ -೨೦೦೯ರ ಅವಧಿಯಲ್ಲಿ ರೂಮ್ ಮೇಟ್ ಆಗಿದ್ದರು. ೨೦೧೨ರಲ್ಲಿ ದೆಹಲಿಗೆ ಹೋಗಿದ್ದ ಮನೋರಂಜನ್ ಡೈರಿಯಲ್ಲಿ ಸಾಯಿಕೃಷ್ಣ ಹೆಸರು ಬರೆದಿದ್ದನಂತೆ ಎನ್ನಲಾಗಿದೆ. ಸಾಯಿಕೃಷ್ಣ ಸದ್ಯ ಎನ್ರಿಚ್ ವಿಡಿಯೊ ಕಂಪನಿ ಸೀನಿಯರ್ ಸಾಪ್ಟವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.