Thursday, August 7, 2025
Google search engine

Homeಅಪರಾಧಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಮತ್ತೊಬ್ಬ ಸಾವು : ಮೃತರ ಸಂಖ್ಯೆ 4ಕ್ಕೆ...

ಕುಡಿತದ ಚಟ ಬಿಡಿಸಲು ನೀಡಿದ್ದ ಔಷಧಿ ಸೇವಿಸಿ ಮತ್ತೊಬ್ಬ ಸಾವು : ಮೃತರ ಸಂಖ್ಯೆ 4ಕ್ಕೆ ಏರಿಕೆ.!

ಕಲಬುರ್ಗಿ: ರಾಜ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದಂತ ಔಷಧಿ ಸೇವಿಸಿ ಮತ್ತೊಬ್ಬ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮಡಾಪುರದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮನೋಹರ್ (30) ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ಸೇಡಂ ತಾಲ್ಲೂಕಿನ ಬುರಗಪಳ್ಳಿ ಗ್ರಾಮದ ಲಕ್ಷ್ಮೀ ನರಸಿಂಹಲು(45) ಹಾಗೂ ಶಹಬಾದ್ ಪಟ್ಟಣದ ನಿವಾಸಿ ಗಣೇಶ್ ರಾಠೋಡ್(30) ಮದಕಲ್ ಗ್ರಾಮದ ನಾಗೇಶ ಭೀಮಶಪ್ಪ ಗಡಗು (25) ಮೃತರು. ಇದೇ ಔಷಧಿ ಸೇವಿಸಿದ ಲಕ್ಷ್ಮೀ ನರಸಿಂಹಲು ಅವರ ಪುತ್ರ ನಿಂಗಪ್ಪನರಸಿಂಹಲು ಅವರ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಔಷಧ ನೀಡಿದ್ದ ತಾಯಪ್ಪ ಅಲಿಯಾಸ್ ಫಕೀರಪ್ಪ ಮುತ್ಯಾನನ್ನು ತೆಲಂಗಾಣ ಗಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಂದಹಾಗೇ ಕುಡಿತದ ಚಟ ಬಿಡಿಸುತ್ತೇನೆ ಎಂಬುದಾಗಿ ಸಾಯಪ್ಪ ಮುತ್ಯಾ ಮದ್ಯ ವ್ಯಸನಿಗಳ ಮೂಗಿನಲ್ಲಿ ಔಷಧಿ ಹಾಕಿದ್ದರು. ಸಾಯಪ್ಪ ಮುತ್ಯಾ ನೀಡಿದಂತ ಔಷಧಿಯಿಂದ ಲಕ್ಷ್ಮೀ ಹಾಗೂ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿರೋದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular