ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ಡೀಸೆಲ್ ದರ ಹೆಚ್ಚಳಗಳ ಪರಿಣಾಮ ಇದೀಗ ಇಂದಿನಿಂದ ಟ್ಯಾಕ್ಸಿ, ಕ್ಯಾಬ್ ದರ ಹೆಚ್ಚಳವಾಗಿದೆ.
ಇಂದಿನಿಂದ ಟ್ಯಾಕ್ಸಿ, ಕ್ಯಾಬ್ ದರಗಳು ಹೆಚ್ಚಳವಾಗಿದ್ದು, ಪ್ರತಿ ಕಿ.ಮೀ ಮೇಲೆ 3 ರೂ ನಿಂದ 5 ರೂವರೆಗೆ ದರ ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರ ಟೋಲ್ ದರ ಶೇ.5ರಷ್ಟು ಹೆಚ್ಚಳ ಮಾಡಿದೆ. ರಾಜ್ಯ ಸರ್ಕಾರವೂ ವಾಹನ ತಯಾರಿಕಾ ಕಂಪನಿಗಳು ಪ್ರತಿ ಕಾರಿನ ಮೇಲೆ ಶೇ. 3ರಿಂದ ಶೇ.4ರಷ್ಟು ದರ ಹೆಚ್ಚಳ ಮಾಡಿದೆ. ಎಲ್ಲಾ ದರ ಹೆಚ್ಚಳಗಳಿಂದಗಿ ಟೂರ್ಸ್ ಆಂಡ್ ಟ್ರಾವಲ್ಸ್ ಅಸೋಸಿಯೇಷನ್ ತಮ್ಮ ಕ್ಯಾಬ್ ಗಳ ಕಿ.ಮೀ ದರ ಏರಿಕೆ ಮಾಡಿವೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಕಳೆದ ವಾರ ಟೋಲ್ ದರವನ್ನು ಸರಾಸರಿ 5%ರಷ್ಟು ಹೆಚ್ಚಿಸಿದೆ. ಅದೇ ಸಮಯದಲ್ಲಿ ಆಟೋಮೊಬೈಲ್ ಕಂಪನಿಗಳು ವಾಹನಗಳ ಬೆಲೆಯನ್ನೂ 3% ರಿಂದ 4%ರಷ್ಟು ಹೆಚ್ಚಿಸಿವೆ. ಈ ಎಲ್ಲದಕ್ಕೂ ಮೇಲುಗೈವಾಗಿ, ರಾಜ್ಯ ಸರ್ಕಾರ 2025ನೇ ಸಾಲಿನ ಬಜೆಟ್‌ನಲ್ಲಿ ಡಿಸೇಲ್ ಮೇಲೆ ಮಾರಾಟ ತೆರಿಗೆಯನ್ನು ಹೆಚ್ಚಿಸಿದ್ದು, ಯೆಲ್ಲೋ ಬೋರ್ಡ್ ಕಾರುಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ಕೂಡ ಹೆಚ್ಚಿಸಿದೆ. ಹೀಗಾಗಿ ಕ್ಯಾಬ್, ಟ್ಯಾಕ್ಸಿ ದರ ಹೆಚ್ಚಳವಾಗಿದೆ.