Wednesday, April 9, 2025
Google search engine

Homeಅಪರಾಧಸಲ್ಮಾನ್ ಖಾನ್ ಗೆ ಮತ್ತೊಂದು ಬೆದರಿಕೆ ಸಂದೇಶ: 5 ಕೋಟಿ ಹಣಕ್ಕೆ ಬೇಡಿಕೆ

ಸಲ್ಮಾನ್ ಖಾನ್ ಗೆ ಮತ್ತೊಂದು ಬೆದರಿಕೆ ಸಂದೇಶ: 5 ಕೋಟಿ ಹಣಕ್ಕೆ ಬೇಡಿಕೆ

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮತ್ತೊಂದು ಬೆದರಿಕೆ ಸಂದೇಶ ಬಂದಿದ್ದು, ₹5 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ.

ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿಗೆ ಮಂಗಳವಾರ ಬೆದರಿಕೆ ಸಂದೇಶ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂದೇಶ ಕಳುಹಿಸಿದ ವ್ಯಕ್ತಿ ತಾನು ಗ್ಯಾಂಗ್‌‍ಸ್ಟರ್ ಲಾರೆನ್ಸ್ ಬಿಷ್ಣೋಯಿ ಅವರ ಸೋದರ ಎಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಲ್ಮಾನ್ ಖಾನ್ ಜೀವಂತವಾಗಿ ಉಳಿಯಬೇಕು ಎಂದು ಬಯಸುವುದಾದರೆ ಬಿಷ್ಣೋಯಿ ಸಮುದಾಯದ ದೇಗುಲಕ್ಕೆ ಭೇಟಿ ಕೊಟ್ಟು ಕ್ಷಮೆಯಾಚಿಸಬೇಕು ಅಥವಾ ₹5 ಕೋಟಿ ನೀಡಬೇಕು. ಇಲ್ಲದಿದ್ದರೆ ಅವನನ್ನು ಕೊಲ್ಲುತ್ತೇವೆ. ನಮ್ಮ ಗ್ಯಾಂಗ್ ಇನ್ನೂ ಸಕ್ರಿಯವಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.

ಬೆದರಿಕೆ ಸಂದೇಶದ ಮೂಲ ಹುಡುಕಾಡಲು ಪೊಲೀಸಲು ತನಿಖೆ ಆರಂಭಿಸಿದ್ದಾರೆ. ಅಲ್ಲದೆ ಸಲ್ಮಾನ್ ಖಾನ್ ಅವರಿಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಈ ಸಂದೇಶ ಹಿಂದೆ ಲಾರೆನ್ಸ್ ಬಿಷ್ಣೋಯಿ ಪಾತ್ರವಿದೆಯೇ ಎಂದು ಸಹ ತನಿಖೆ ನಡೆಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular