Sunday, April 20, 2025
Google search engine

Homeಅಪರಾಧಕಾನೂನುಮುಡಾ ಹಗರಣಕ್ಕೆ ಮತ್ತೊಂದು ಟ್ವಿಸ್ಟ್ : ಸಿಎಂ ಪತ್ನಿ ಪಾರ್ವತಿ ಸೇರಿ 12 ಜನರ ವಿರುದ್ಧ...

ಮುಡಾ ಹಗರಣಕ್ಕೆ ಮತ್ತೊಂದು ಟ್ವಿಸ್ಟ್ : ಸಿಎಂ ಪತ್ನಿ ಪಾರ್ವತಿ ಸೇರಿ 12 ಜನರ ವಿರುದ್ಧ ಕೇಸ್ ದಾಖಲು

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗು ಸಾಕಷ್ಟು ತನಿಖೆಯ ಪ್ರಗತಿ ಕಂಡಿದೆ. ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದು ಹಾಗೂ ಇಡಿ ಅಧಿಕಾರಿಗಳು ಕೂಡ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದ್ದು, ಎಲ್ಲವೂ ಆದ ಬಳಿಕ ಕೇಸ್ ಇನ್ನು ಕೋರ್ಟ್ ನಲ್ಲಿ ಇದೆ. ಇದರ ಮಧ್ಯ ಇದೀಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಭೂಮಾಲಿಕ ದೇವರಾಜಯ್ಯ ಅಣ್ಣನ ಮಗಳು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಹಾಗೂ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧ ಕೋರ್ಟ್ ನಲ್ಲಿ ದಾವೆ ಹೊಡಿದ್ದಾರೆ.

ಸಿಎಂ, ಪತ್ನಿ ಪಾರ್ವತಿ ಬಾಮೈದ ಸೇರಿ 12 ಜನರ ವಿರುದ್ಧ ಮೈಸೂರಿನ JMFC ಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ಭೂಮಿ ಮಾರಿದ ದೇವರಾಜಯ್ಯ ಸಂಬಂಧಿಕರಿಂದ ಭೂಮಿ ಪಡೆದುಕೊಂಡು, ಸಿಎಂ ಬಾಮೈದ ಮಲ್ಲಿಕಾರ್ಜುನ್ ಗೆ ಭೂಮಿ ಮಾರಿದ್ದ. ದೇವರಾಜು ಮೋಸ ಮಾಡಿದ್ದಾರೆ ಎಂದು ದೇವರಾಜ್ ಸಂಬಂಧಿಕರು ಆರೋಪಿಸಿದ್ದಾರೆ.

ದೇವರಾಜು ಆರೋಪಿಸಿ ಸಂಬಂಧಿಕರು ಇದೀಗ ದಾವೇ ಹೂಡಿದ್ದಾರೆ.ದೇವರಾಜು ಅಣ್ಣನ ಮೈಲಾರಯ್ಯನ ಮಗಳು ಜಮುನಾ ಎನ್ನುವವರು ಇದೀಗ ದಾವೆ ಹೂಡಿದ್ದಾರೆ. ನನ್ನ ಚಿಕ್ಕಪ್ಪ ದೇವರಾಜು ಭೂಮಿ ಮಾರಿರುವುದು ಯಾವುದೇ ಕಾರಣಕ್ಕೂ ನನಗೆ ಇಲ್ಲಿಯವರೆಗೂ ಗೊತ್ತಿರಲಿಲ್ಲ ಸಿಎಂ ಕುಟುಂಬಕ್ಕೆ ಭೂಮಿ ಮಾರಿ ಇರುವುದು ನನಗೆ ಗೊತ್ತೇ ಇರಲಿಲ್ಲ ಮಾಧ್ಯಮಗಳ ಮೂಲಕ ಮಾರಾಟವಾಗಿರುವುದು. ಗೊತ್ತಾಗಿದೆ. ಕುಟುಂಬದ ಪ್ರಕಾರ ಭೂಮಿ ನನ್ನ ತಂದೆ ಹೆಸರಿಗೆ ಬರಬೇಕು ಎಂದರು.

ಆದರೆ ಇವರೆಲ್ಲ ನನ್ನ ಗಮನಕ್ಕೆ ತರದೆ ಭೂಮಿ ಮಾರಾಟ ಮಾಡಿದ್ದಾರೆ. ಭೂಮಿ ಮಾರಾಟ ಮಾಡಿದಾಗ ನಾವೆಲ್ಲ ಚಿಕ್ಕವರು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಯನ್ನು ಕೋರ್ಟಿಗೆ ಕೊಟ್ಟಿದ್ದೇನೆ. ಸಿಎಂ ಕುಟುಂಬ ಈ ಭೂಮಿ ಖರೀದಿಸಿದರೆ ಅದಕ್ಕೂ ನನಗೂ ಸಂಬಂಧವಿಲ್ಲ. ನ್ಯಾಯಯುತವಾಗಿ ಭೂಮಿ ನಮಗೆ ಬರಬೇಕು ಎಂದು ದೇವರಾಜು ಅಣ್ಣ ಮೈಲಾರಯ್ಯನ ಮಗಳು ಜಮುನಾ ಹೇಳಿಕೆ ನೀಡಿದರು.

2024 ಅಕ್ಟೋಬರ್ 23ರಂದು ಜಮುನಾ ಅವರು ಮೈಸೂರಿನ JMFC ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದಾರೆ. ಮರುದಿನ ಅಂದರೆ 2024 ಅಕ್ಟೋಬರ್ 24ರಂದು ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, 2025 ಜನವರಿ 10 ಕ್ಕೆ ವಿಚಾರಣೆಯನ್ನು ನಿಗದಿ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಎಕರೆ ಭೂಮಿ ಈ ಭೂಮಿ ಸಂಬಂಧ ಕೋರ್ಟ್ ನಲ್ಲಿ ಇದೀಗ ಜಮುನಾ ದಾವೆ ಹೊಡಿದ್ದಾರೆ. ತಮ್ಮ ಗಮನಕ್ಕೆ ತೆರೆದ ಭೂಮಿ ಮಾರಾಟವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular