Saturday, April 19, 2025
Google search engine

Homeರಾಜಕೀಯಅಕ್ಕಿ ನೀಡುವುದು ತಡವಾದರೆ ಅಂತದೇನ್ ಸಮಸ್ಯೆ ಆಗಲ್ಲ: ಸತೀಶ್ ಜಾರಕಿಹೊಳಿ

ಅಕ್ಕಿ ನೀಡುವುದು ತಡವಾದರೆ ಅಂತದೇನ್ ಸಮಸ್ಯೆ ಆಗಲ್ಲ: ಸತೀಶ್ ಜಾರಕಿಹೊಳಿ

ಮೈಸೂರು: ಅಕ್ಕಿ ಕೊರತೆಯನ್ನು ಸರಿದೂಗಿಸುವ ಬೇರೆ ಬೇರೆ ಆಹಾರ ಪದಾರ್ಥಗಳು ಇರುವುದಾಗಿ ಆಹಾರ ಸಚಿವರು ಹೇಳಿದ್ದಾರೆ. ಒಂದು ತಿಂಗಳು, ಎರಡು ತಿಂಗಳು ತಡವಾದರೆ ಅಂತಹದ್ದೇನು ಆಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದಕ್ಕೆ ನಮಗೆ ಪರ್ಯಾಯ ಮಾರ್ಗಗಳು ಇವೆ. ಬೇರೆ ಬೇರೆ ಆಹಾರ ಪದಾರ್ಥ ಕೊಡಬಹುದು.  5 ಕೆಜಿ ಈಗಾಗಲೇ ಕೊಡುತ್ತಿದ್ದೇವೆ. ಲೇಟಾದರೆ ಅಂತದೇನ್ ಸಮಸ್ಯೆ ಆಗಲ್ಲ ಎಂದರು.

ಗ್ಯಾರಂಟಿ ಯೋಜನೆಗಳು ಹಂತ ಹಂತವಾಗಿ ಜಾರಿಯಾಗುತ್ತಿವೆ. ಈಗಾಗಲೇ ವಿದ್ಯುತ್, ಶಕ್ತಿ ಯೋಜನೆ ಜಾರಿಗೆ ಬಂದಿದೆ, ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 15 ರವರೆಗೆ ಸಮಯ ಇದೆ. ಮೂರು ಪ್ರಮುಖ ಗ್ಯಾರಂಟಿಗಳು ಜಾರಿಯಾಗಿವೆ, ಆತಂಕ ಇಲ್ಲ ಎಂದರು.

ಮೈಸೂರು- ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಅಪಘಾತವಾಗಿದೆ. ಸಾವು ನೋವು ಸಂಭವಿಸಿರುವುದು ದಾಖಲಾಗಿದೆ.  ಹೆದ್ದಾರಿ ನಿರ್ಮಾಣದಲ್ಲಿ ತಾಂತ್ರಿಕ ದೋಷ ಆಗಿರಬಹುದು.  ಇದು ನಮ್ಮ ಇಲಾಖೆಯ ಗಮನಕ್ಕೆ ಬಂದಿದೆ. ರಸ್ತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವಹಿಸಲಾಗಿದೆ. ಅವರ ಜೊತೆ ಸೇರಿಕೊಂಡು ಸರಿಪಡಿಸುತ್ತೇವೆ. ಟೋಲ್ ದರ ಕೂಡ ಜಾಸ್ತಿ ಇದೆ.  ನಾವು ಎಲ್ಲವನ್ನೂ ಸರಿ ಮಾಡಲು ಬರುವುದಿಲ್ಲ. ಆದರೆ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

RELATED ARTICLES
- Advertisment -
Google search engine

Most Popular