ತುಮಕೂರು: ಕೊಬ್ಬರಿ ಖರೀದಿ ಮಾಡಲು ಎಪಿಎಂಸಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತುರುವೇಕೆರೆ ಎಪಿಎಂಸಿಯಲ್ಲಿ ಕೊಬ್ಬರಿ ಮಾರಾಟಕ್ಕೆ ಬಂದ ರೈತರಿಂದ ಕೊಬ್ಬರಿ ಖರೀದಿ ಮಾಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರಿಂದ ನೂರಾರು ಟ್ರ್ಯಾಕ್ಟರ್ ಗಳು ಸ್ಥಳದಲ್ಲಿ ಸಾಲುಗಟ್ಟಿ ನಿಂತಿದ್ದು, ರೈತರು ಊಟ, ನಿದ್ರೆ ಬಿಟ್ಟು ಟ್ರಾಕ್ಟರ್ ಬಳಿ ಕಾವಲು ಕಾಯುತ್ತಿದ್ದಾರೆ.
ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗದೆ ಕೊಬ್ಬರಿ ಬೆಳೆದ ರೈತರು ಕಂಗಾಲಾಗಿದ್ದಾರೆ. ಕೊಬ್ಬರಿ ಕಪ್ಪಾಗಿವೆ ಎಂದು ಖರೀದಿ ಮಾಡಲು ಬ್ಬರಿ ಖರೀದಿ ಕೇಂದ್ರದ ಅಧಿಕಾರಿಗಳು ನಿರಾಕರಿಸಿರುವುದು ಮಾತ್ರವಲ್ಲದೇ, ಖರೀದಿಸಲು ಚೀಲಗಳಿಲ್ಲ, ಲಾರಿ ಬಂದಿಲ್ಲ ಎಂದು ದಿನಕ್ಕೊಂದು ಕಾರಣ ನೀಡುತ್ತಿದ್ದಾರೆ.
ಗುಣಮಟ್ಟದ ಕೊಬ್ಬರಿಯನ್ನು ಖರೀದಿಸಲು ಅಧಿಕಾರಿಗಳ ಹಿಂದೇಟು ಹಾಕುತ್ತಿದ್ದು, ಒಂದು ತಿಂಗಳಿಂದ ಕಾಯುತ್ತಿದ್ದರೂ ಹಣಕ್ಕಾಗಿ ಅಧಿಕಾರಿಗಳು ಕೊಬ್ಬರಿ ಖರೀದಿ ಮಾಡ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ನಫೆಡ್ ಮೂಲಕ ಕೊಬ್ಬರಿ ಖರೀದಿಸಲು ಜು.27 ಕೊನೆಯ ದಿನವಾಗಿದ್ದು. 200ಕ್ಕೂ ಹೆಚ್ಚು ಕೊಬ್ಬರಿ ತುಂಬಿದ ಟ್ರ್ಯಾಕ್ಟರ್ ಗಳು ಎಂಪಿಎಂಸಿಯಲ್ಲಿ ಸಾಲುಗಟ್ಟಿ ನಿಂತಿವೆ.
ಕೊಬ್ಬರಿ ಖರೀದಿಸದ ಎಂಪಿಎಂಸಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ, ತಹಶೀಲ್ದಾರ್ ಆಗಮಿಸಿ ಪರಿಶೀಲನೆ ನಡೆಸುವಂತೆ ರೈತರು ಮನವಿ ಮಾಡಿದ್ದಾರೆ.
