ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಳೆದ ಮೂರು ತಿಂಗಳ ಹಿಂದೆ ನಮ್ಮ ಸಹವರ್ದಿ ಮದರಿ ಆಸ್ತಾನೆಯಲ್ಲಿ ಲಕ್ಷಾಂತರ ನಗದು ಮತ್ತು ಚಿನ್ನ ದೊಚಿ ಪರಾರಿಯಾಗಿರುವ ಘಟನೆ ಜರುಗಿತು ಆದರೆ ಪೊಲೀಸರು ಪ್ರಕರಣ ಮಾತ್ರ ದಾಖಲಿಕೊಂಡಿದ್ದೆ ಅಷ್ಟೇ ಯಾವುದೆ ನನ್ನ ವಸ್ತುವಾಗಲಿ, ನಗದಾಗಲಿ ಪತ್ತೆ ಹಚ್ಚಲಿಲ್ಲ ಎಂದು ಮದರಿ ಆಸ್ತಾನೆ ಗುರುಗಳಾದ ಅಫ್ಸರ್ ಪಾಷ (ಮುನವಾರ್‌ಷಾ) ಪೊಲೀಸರ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿದರು.
ಪಟ್ಟಣದ ಮುಸ್ಲಿಂ ಬಡಾವಣೆಯ ಸಹವರ್ದಿ ಮದರಿ ಆಸ್ತಾನೆಯಲ್ಲಿ ಮೊಹರಂ ಕಡೆದಿನದ ಅಂಗವಾಗಿ ಪಾನಕ ವಿತರಿಸಿ ಮಾತನಾಡಿದ ಅವರು ಮೇ ೭ ಮಧ್ಯ ರಾತ್ರಿ ಮನೆಗೆ ನುಗ್ಗಿದ ಕಳ್ಳರು ತಮ್ಮ ಚಾಣಕ್ಷತೆಯಿಂದ ನಕಲಿ ಕೀಗಳ ಮೂಲಕ ಬೀಗ ತೆಗೆದು ಒಳಗೆ ನುಗ್ಗಿ ಬೀರುವಿನಲ್ಲಿದ್ದ ೨೫ಲಕ್ಷ ರೂಗಳು ಮತ್ತು ಗುರುಗಳು ಹಾಗೂ ಪತ್ನಿಯ ಒಡವೆಗಳನ್ನ ಕಳ್ಳತನ ಮಾಡಿಕೊಂಡು ಹೋರಗೆ ಬಂದ ಕಳ್ಳ ಮತ್ತೊಬ್ಬನಿಗೆ ಕಳ್ಳತನ ಮಾಡಿದ್ದ ಬ್ಯಾಗನ್ನು ನೀಡಿ ಮತ್ತೆ ವಾಪಸ್ಸ್ ಬಂದು ಯತಾಸ್ಥಿತಿ ಬೀಗವನ್ನು ಲಾಕ್ ಮಾಡಿದ್ದಾರೆ ಸಂಬಂಧಿಸಿದಂತೆ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದೆ.
೬೦೦ಗ್ರಾಂ ಚಿನ್ನ ಹಾಗೂ ೨೫ಲಕ್ಷ ನಗದು ಹಣವನ್ನು ಕಳ್ಳರು ದೊಚಿ ಪರಾರಿಯಾಗಿ ಇದಕ್ಕೆ ಸಂಬಂಧಿಸಿದಂತೆ ೩ ತಿಂಗಳು ಕಳೆದರು ಪೊಲೀಸರಿಂದ ನನ್ನ ವಸ್ತುವಿನ ಪತ್ತೆ ಮಾಡಲಿಲ್ಲ ಹಾಗಾಗಿ ಪೊಲೀಸ್ ಇಲಾಖೆಯ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ರಾಜ್ಯ ಉನ್ನತಾಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಬೇಸರ ವ್ಯಕ್ತ ಪಡಿಸಿದರು.
ನಾನು ಅನುಮಾನಸ್ಪದ ವ್ಯಕ್ತಿಗಳಾದ ಅಫ್ಜಲ್ ಮತ್ತು ಸಂತೋಷ್ ಎಂಬ ಇಬ್ಬರ ಮೇಲೆ ಅನುಮಾನವಿದೆ ಎಂದು ತಿಳಿಸಿದ್ದು ಕಳ್ಳರ ಬಗ್ಗೆ ಒಂದಿಷ್ಟು ಸುಳಿವು ನೀಡಿದ್ದು ಅವರನ್ನು ಸಹ ಪೊಲೀಸರು ಪತ್ತೆ ಹಚ್ಚಿ ಪ್ರಕರಣವನ್ನು ದಾಖಲಿದ್ದು ನಂತರ ಜೈಲಿನಿಂದ ಬಿಡುಗಡೆಗೊಂಡು ಆರಾಮವಾಗಿ ತಿರುಗಾಡುತಿದ್ದು ಇವರು ವಿವಿಧ ಜಿಲ್ಲೆಗಳ ಠಾಣೆಗಳಲ್ಲಿ ಹಲವು ಪ್ರಕರಣಗಳು ಸಹ ವಿದ್ದು ಇದೆ ಇವರ ದೈನಂದಿನ ವೃತ್ತಿಯಾಗಿದ್ದು ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದರು.