ಮೈಸೂರು: ದೆಹಲಿಯಲ್ಲಿನಅಭಿವೃದ್ಧಿ ಮುಂದಿಟ್ಟುಕೊಂಡುರಾಜ್ಯದಲ್ಲಿನಜಿಪಂ, ತಾಪಂ, ಸ್ಥಳೀಯ ಸಂಸ್ಥೆ ಹಾಗೂ ಲೋಕಸಭಾ ಚುನಾವಣೆಗಳನ್ನು ಆಮ್‌ಆದ್ಮಿ ಪಕ್ಷಎದುರಿಸಲು ಸಿದ್ಧತೆ ನಡೆಸಿದೆ ಎಂದು ಪಕ್ಷದರಾಜ್ಯಾಧ್ಯಕ್ಷ ಮುಖ್ಯಮಂತ್ರಿಚಂದ್ರು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾಚುನಾವಣೆ ವೇಳೆ ರಾಜ್ಯದಲ್ಲಿ ೪೦ ಪಸೆಂಟ್, ಕೋಮುವಾದಿ ಹಾಗೂ ವಿಭಜನೆವಾದಿ ಸರ್ಕಾರದ ಬದಲುಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಾಗಿಜನತೆಅಧಿಕಾರ ನೀಡಿದ್ದಾರೆ. ಜೊತೆಗೆ, ಇಷ್ಟು ದಿನ ದೆಹಲಿಯಲ್ಲಿನಉಚಿತ ಸೌಲಭ್ಯ ವಿರೋಧಿಸುತ್ತಿದ್ದವರೇಅದನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಸರ್ಕಾರಕೇಜ್ರಿವಾಲ್‌ಅವರಿಗೆಧನ್ಯವಾದವನ್ನಾದರೂ ಹೇಳಬೇಕಾಗಿತ್ತೆಂದರು.
ಕಾಂಗ್ರೆಸ್ ಸರ್ಕಾರಉಚಿತಯೋಜನೆ ಜಾರಿಗೊಳಿಸಿದೆ. ಆದರೆಅದುಜನತೆಗೆ ಸುಲಭವಾಗಿ ಸಿಗುತ್ತಿದೆಯೇ ಎಂಬ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಭ್ರಷ್ಟಾಚಾರತೊಲಗಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದವರು ಈ ನಿಟ್ಟಿನಲ್ಲಿ ಬದ್ಧತೆ ಪ್ರದರ್ಶಿಸಬೇಕಾಗಿದೆ. ಈಗ ಶಾಸಕರೇ ಟ್ರಾನ್ಸ್‌ಫರ್‌ಗಳಿಗೆ ಕೈಹಾಕಿರುವುದು ಸರಿಯಲ್ಲ. ಉಚಿತಎನ್ನುವ ವೇಳೆ ಆರೋಗ್ಯ, ಶಿಕ್ಷಣಕ್ಕೆ ರಾಜ್ಯ ಸರ್ಕಾರ ಪ್ರಾಧಾನ್ಯತೆ ನೀಡಿದಲ್ಲಿಖಾಸಗಿಯವರಿಂದ ಶೋಷಣೆತಪ್ಪುತ್ತದೆಎಂದರು.
ಸಿದ್ದರಾಮಯ್ಯ ಅವರುಚುನಾವಣೆ ಮೊದಲು ಭರವಸೆ ನೀಡಿದಗ್ಯಾರೆಂಟಿಯೋಜನೆ ಲಂಚ ಎಂದುಆರೋಪಿಸುವವರಿಗೆಕೇಂದ್ರ ಸರ್ಕಾರಅದಾನಿ, ಅಂಬಾನಿ ಮೊದಲಾದವರ ಹತ್ತು ಲಕ್ಷಕೋಟಿ ಮನ್ನಾ ಮಾಡಿದುದುಏನನ್ನಿಸುತ್ತದೆಎಂದು ಪ್ರಶ್ನೆ ಮಾಡಿದರು.
ಮಣಿಪುರಘಟನೆಕುರಿತು ಮಾತನಾಡಿ, ಕೇಂದ್ರ ಹಾಗೂ ಆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಿದ್ದರೂ ಈ ಬಗ್ಗೆ ಪ್ರಧಾನಿ ಮೌನವಾಗಿರುವುದು ಸರಿಯಲ್ಲ. ಸುಪ್ರೀಂಕೋರ್ಟ್‌ಛೀಮಾರಿ ಹಾಕಿರುವುದು ಸಂಬಂಧಿಸಿದ ಸರ್ಕಾರಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆಎಂದು ಲೇವಡಿ ಮಾಡಿದರು.
ಪದಾಧಿಕಾರಿಗಳಾದ ಮಾಲವಿಕ ಗುಬ್ಬಿವಾಣಿ, ಬಿ.ಟಿ.ನಾಗಪ್ಪ, ಕುಶಾಲಸ್ವಾಮಿ, ಸೋಸಲೆ ಸಿದ್ದರಾಜು ಇನ್ನಿತರರು ಹಾಜರಿದ್ದರು.