Wednesday, May 27, 2026
Google search engine

Homeರಾಜ್ಯಸುದ್ದಿಜಾಲಚಿಕ್ಕಕೊಪ್ಪಲು ಹಾಲು ಸಂಘಕ್ಕೆ ಅಪ್ಪಾಜಿಗೌಡ ಅಧ್ಯಕ್ಷ, ರತ್ನಮ್ಮ ನಾಗರಾಜೇಗೌಡ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ಚಿಕ್ಕಕೊಪ್ಪಲು ಹಾಲು ಸಂಘಕ್ಕೆ ಅಪ್ಪಾಜಿಗೌಡ ಅಧ್ಯಕ್ಷ, ರತ್ನಮ್ಮ ನಾಗರಾಜೇಗೌಡ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಪ್ಪಾಜಿಗೌಡ ಮತ್ತು ಉಪಾಧ್ಯಕ್ಷರಾಗಿ ರತ್ನಮ್ಮನಾಗರಾಜೇಗೌಡ ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಪ್ಪಾಜಿಗೌಡ, ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರತ್ನಮ್ಮನಾಗರಾಜೇಗೌಡ ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಕಳೆದ ಮೇ.೫ ರಂದು ನಡೆದ ಚುನಾವಣೆಯಲ್ಲಿ ನಿರ್ದೇಶಕರು 11 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರು ಚುನಾವಣಾಧಿಕಾರಿಯಾಗಿ ಹುಣಸೂರು ಸಹಕಾರ ಇಲಾಖೆ ನಿರೀಕ್ಷಕ ಸಿ.ಎನ್. ಗಿರೀಶ್ ಕಾರ್ಯನಿರ್ವಹಿಸಿದರು.

ಚು‌ನಾವಣಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಪುನೀತ್, ಸಿ.ಎಂ.ಮಾದೇಗೌಡ, ಸಿ.ಅರ್.ಮಂಜುನಾಥ್, ಕುಮಾರ, ಸಿ.ಟಿ.ಶ್ರೀನಿವಾಸ್, ದೊಡ್ಡ ಜವರನಾಯಕ, ಶೋಭ, ರತ್ನಮ್ಮ, ಶ್ರೀನಿವಾಸ್, ಸಿ.ಆರ್.ಮನೋಹರ್ , ಸಂಘದ ಸಿಇಓ ಸಿ.ಆರ್.ಉಮೇಶ್ , ಸಿಬ್ಬಂದಿಗಳಾದ ಲಕ್ಷ್ಮಣ್ ಸಿ.ಅರ್.ಚೆಲುವರಾಜ್ ಇದ್ದರು.

ನಂತರ ನೂತನ ಅಧ್ಯಕ್ಷ – ಉಪಾಧ್ಯಕ್ಷರನ್ನು ಗ್ರಾಮದ ಯಜಮಾನರಾದ ಸಿ.ಟಿ.ಪುರುಷೋತ್ತಮ್, ಸತ್ಯಪ್ಪ, ಕುಪ್ಪೆ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಬಿ.ಸಂತೋಷ್, ಸರ್ವೆಯರ್ ಬಸವರಾಜು, ಸಿಕೆಅರ್ ಮನು, ಡಿ.ಹೇಮಂತ್ ಕುಮಾರ್, ಸಿ‌.ಎಸ್.ಗಿರೀಶ್, ಡಿ.ಕುಮಾರಸ್ವಾಮಿ, ತೊ.ಸ್ವಾಮೀಗೌಡ ಪುಟ್ಟರಾಜು,ಮೀನ್ ರಾಮಸ್ವಾಮಿ, ಸತೀಶ್, ಪ್ರಕಾಶ್, ಸೇರಿದಂತೆ ಮತ್ತಿತರು ಅಭಿನಂಧಿಸಿ ಸಂಘದ ನೂತನ ಕಟ್ಟಡ ನಿರ್ಮಾಣ, ಸಂಘದ ಅಭಿವೃದ್ಧಿ, ಸಂಘ ಷೇರುದಾರರಿಗೆ ಜಿಲ್ಲಾ ಒಕ್ಕೂಟದಿಂದ ಸಿಗುವ ಸವಲತ್ತು ಒದಗಿಸುವಂತೆ ಅಧ್ಯಕ್ಷ- ಉಪಾಧ್ಯಕ್ಷರಿಗೆ ಕಿವಿ ಮಾತು ಹೇಳಿದರು.

RELATED ARTICLES
- Advertisment -
Google search engine

Most Popular