ರಾಮನಗರ: ರಾಮನಗರಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಜು. ೧೦ರ ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿ ಜಿಲ್ಲಾಧಿಕಾರಿಗಳಿಗೆ ೭ನೇ ವೇತನ ಆಯೋಗದ ಅನುಷ್ಠಾನ ಹಾಗೂಸಂಘದ ಪ್ರಮುಖ ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಮನಗರಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್, ಗೌರವಾಧ್ಯಕ್ಷರಾದ ಎಂ.ಕಾಂತರಾಜು, ಖಜಾಂಚಿ ಎಂ.ಸಿ. ರಾಜಶೇಖರ ಮೂರ್ತಿ, ರಾಜ್ಯ ಪರಿಷತ್ ಸದಸ್ಯರಾದಬಿ.ಎಲ್. ಸುರೇಂದ್ರ, ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ಕಾರ್ಯಾಧ್ಯಕ್ಷ ಎನ್. ರಮೇಶ್, ಹಿರಿಯ ಉಪಾಧ್ಯಕ್ಷ ಭೈರಪ್ಪ, ಕಾರ್ಯಾಧ್ಯಕ ರಾಜೇಗೌಡರು, ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್ ಪಾದ್ರಳ್ಳಿ, ಚನ್ನಪಟ್ಟಣ ಕಾರ್ಯದರ್ಶಿ ಗುಂಡಪ್ಪ ಎಂ.ಪಿ., ಚನ್ನಪಟ್ಟಣಖ ಜಾಂಚಿಚಿಕ್ಕ ಚನ್ನೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.