ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ಭಾನುವಾರದಂದು ಡಿ.ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗಳ ತಿರಸ್ಕೃತ ಹಕ್ಕು ಪತ್ರ ಅರ್ಜಿಗಳ ಮೇಲ್ಮನವಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. 2019 ರಲ್ಲಿ ಪೀಪಲ್ ಟ್ರೀ ಸಂಸ್ಥೆ, ಸ್ಪೆಡ್ಸ್ ಸಂಸ್ಥೆ ಮತ್ತು BKS ಸೇರಿ ಡಿ.ಬಿ ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 11 ಹಾಡಿಗಳಿಂದ 2006ರ ಅರಣ್ಯ ಹಕ್ಕು ಕಾಯಿದೆಯಡಿ ಜಮೀನು ಮತ್ತು ವಾಸಸ್ಥಳ ಹಕ್ಕುಪತ್ರ ಕೋರಿ 416 ಎ ನಮೂನೆ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಈ ಪೈಕಿ 302 ಕುಟುಂಬಗಳಿಗೆ ಜಂಟಿ ಸರ್ವೆ ನಡೆಸಿದ ನಂತರ ಉಪವಿಭಾಗೀಯ ಮಟ್ಟದ ಅರಣ್ಯ ಸಮಿತಿಯಲ್ಲಿ ಒಟ್ಟು 90 ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು.
ತಿರಸ್ಕೃತ ಅರ್ಜಿದಾರರ ಮನವಿ ಮೇರೆಗೆ ಸನ್ಮಾನ್ಯ ಶಾಸಕರು ಮತ್ತು ಮಾನ್ಯ ಜಿಲ್ಲಾಕಾರಿಗಳ ಸಮ್ಮುಖದಲ್ಲಿ 16-10-2025 ರಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ ಸಭೆಯಲ್ಲಿ 90 ತಿರಸ್ಕರಿಸಿದ ಅರ್ಜಿಗಳನ್ನು ಪುನರ್ ಪರಿಶೀಲನೆ ಮಾಡಲು ತೀರ್ಮಾನಿಸಲಾಗಿತ್ತು. ಈ ನಿಟ್ಟಿನಲ್ಲಿ ಆನೆಮಾಳದ ಹಾಡಿಯಲ್ಲಿ ಅರಣ್ಯ ಹಕ್ಕು ಸಮಿತಿಗಳ ಸಭೆ ಕರೆದು ತಿರಸ್ಕೃತ ಹಕ್ಕುಪತ್ರ ಅರ್ಜಿಗಳ ಮೇಲ್ಮನವಿ ಸಲ್ಲಿಸಲು ಪ್ರಕ್ರಿಯೆ ಆರಂಭಿಸಿಲಾಗಿದೆ. ಜೊತೆಗೆ 2018 ಕ್ಕೂ ಮೊದಲು ವಿತರಣೆ ಆಗಿರುವ ಹಕ್ಕುಪತ್ರದಲ್ಲಿ ಅವಲಂಬಿತರ ಹೆಸರು ಕೈಬಿಟ್ಟಿದ್ದು ತಿದ್ದುಪಡಿ ಕೋರಿ ಅರ್ಜಿ ಸಲ್ಲಿಸಲು ಸಹ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.

ಈ ಸಭೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಾ, ಪೀಪಲ್ ಟ್ರೀ ಸಂಸ್ಥೆಯ ಸುರೇಶ್ ಟಿ.ಸಿ, SVYM ಗಣೇಶ್, ಸ್ಪೆಡ್ಸ್ ಸಂಸ್ಥೆಯ ರಾಮು, ಕುಳ್ಳಪ್ಪ, ಕುಮಾರಿ, BKS ಮಾಜಿ ಅಧ್ಯಕ್ಷರಾದ ಕೆಂಚಯ್ಯ, ರಾಜು, ಗೌರಿ, ಮಂಜುಳಾ ಮತ್ತು ಅರಣ್ಯ ಸಮಿತಿ ಅಧ್ಯಕ್ಷರು ಸದಸ್ಯರು ಹಾಜರಿದ್ದರು.



