ಚಾಮರಾಜನಗರ : ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಪೂವಿತ.ಎಸ್ ಅವರಿಗೆ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು..
ಬೇಡಿಕೆಗಳು : ವಿಶೇಷ ಚೇತನ ಪುರುಷರಿಗೆ ರಾಜ್ಯದ್ಯಂತ ಸಾರಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಡುವುದು, ಮಾಶಾಸನವನ್ನು ಹೆಚ್ಚಳ ಮಾಡುವುದು, ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಪೂರ್ಣ ಪ್ರಮಾಣದ ಅಧಿಕಾರಿಯನ್ನ ನೇಮಿಸುವುದು, ಬ್ಯಾಕ್ ಲಾಗ್ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವುದು,ಪದವೀಧರ ನಿರುದ್ಯೋಗಿಗಳಿಗೆ ಅಂದರೆ ೧೯೯೦ ರಿಂದ ೨೦೨೨-೨೩ರ ವರೆಗಿನ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆವನ್ನು ನೀಡುವುದು.
ಜಿಲ್ಲಾಧ್ಯಕ್ಷ ರಮೇಶ್.ಎಂ, ಗೌರವ ಅಧ್ಯಕ್ಷ ಎನ್ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ವಜ್ರಮನಿ,ಚಾಮರಾಜನಗರ ತಾಲ್ಲೂಕು ಅದ್ಯಕ್ಷ ರೂಪೇಶ್,ಸಲಹಾ ಸಮಿತಿಯ ಸದಸ್ಯ ಸಿದ್ದಯ್ಯ, ಶಿವಶಂಕರ್, ನಾಗರಾಜು,ಚೌಡಶೆಟ್ಟಿ,ವಿ.ಕುಮಾರ್, ಮಾದೇವ್ ಇದ್ದರು.