ಮೈಸೂರು: ಸರ್ಕಾರವು ಚಾಮುಂಡಿ ಬೆಟ್ಟ ಅಭಿವೃದ್ಧಿ ಪಡಿಸಲು ಸ್ಮಾರ್ಟ್ ಕಾರ್ಡ್ ತರಬೇಕೆಂದು ಚರ್ಚಿಸಿದ ವಿಷಯ ಕೇಳಿ ಬಂದಿರುತ್ತದೆ . ಕನಿಷ್ಟ ರೂ 5000 ದಿಂದ ಗರಿಷ್ಟ ರೂ 1 ಲಕ್ಷಕ್ಕೆ ಕಾರ್ಡ ಮಾರುವುದರಿಂದ ಜನ ಸಾಮಾನ್ಯರಿಗೆ ಹಾಗೂ ಬೇರೆ ಬೇರೆ ರಾಜ್ಯದಿಂದ ಬರುವ ಪ್ರವಾಸಿಗರಿಗೆ ದೇವಿ ದರ್ಶನಕ್ಕೆ ಬಹಳ ತೊಂದರೆಯಾಗುವ ಜೊತೆ ಹಣ ಲೂಟಿ ಮಾಡುವ ಸನ್ನಿವೇಶವಿರುತ್ತದೆ.
ಪ್ರತೀ ಬಾರಿಯೂ ವಿಶೇಷ ದಿನ ಹಾಗೂ ವಾರಾಂತ್ಯಕ್ಕೆ ಸಾವಿರಾರು ಜನರು ರಾಜಕಾರಣಿಗಳ ಹೆಸರೇಳಿ ನೇರ ದರ್ಶನ ಪಡೆಯುವುದರಿಂದ ಸಾಮಾನ್ಯ ಜನರಿಗೆ ದರ್ಶನ ಪಡೆಯಲು ಹರಸಾಹಸ ಪಡಬೇಕಾಗುತ್ತದೆ. ಇಂತಹ ಸಮಯದಲ್ಲಿ ಸ್ಮಾರ್ಟ್ ಕಾರ್ಡ್ ಮಾಡುವುದರಿಂದ ಹಣವಿರುವವನೇ ನೇರ ದರ್ಶನ ಪಡೆಯಲು ವಿಶೇಷ ದಿನ ಹಾಗೂ ವಾರಾಂತ್ಯಕ್ಕೆ ಬರಲು ಪ್ರಾರಂಭಿಸಿದರೆ ಸಾರ್ವಜನಿಕರಿಗೆ ಅದರಲ್ಲೂ ಬೇರೆ ರಾಜ್ಯದಿಂದ ಬರುವ ಪ್ರವಾಸಿಗರಿಗೆ ದೇವಿಯ ದರ್ಶನ ಮಾಡಲು ಅವಕಾಶವೇ ಇಲ್ಲದಂತಾಗುತ್ತದೆ.
ರಾಜಕಾರಣಿಗಳಿಗೂ ಸಹ ಯಾವಾಗ ಬೇಕೋ ಆಗ ಗುಂಪು ಗುಂಪಾಗಿ ದರ್ಶನ ಪಡೆಯಲು ಅವಕಾಶ ನೀಡಬಾರದು. ಅಲ್ಲದೆ ಕೆಲವು ಜನರು ಪ್ರವಾಸಿಗರಿಗೆ ಹೆಚ್ಚಿನ ಹಣ ಪಡೆದು ನೇರ ದರ್ಶನ ಮಾಡುವ ವ್ಯವಸ್ಥೆ ಮಾಡಿ ಪ್ರವಾಸಿಗರಿಂದ ಸಾವಿರಾರು ರೂಪಾಯಿ ಹಣ ಲೂಟಿ ಮಾಡುತ್ತಿದ್ದಾರೆ. ಇದರಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರಿಗೂ ಪಾಲು ಹೋಗುತ್ತದೆ ಎಂದು ಆದ್ದರಿಂದ ಸರ್ಕಾರವು ಈ ಕೂಡಲೇ ಇಂತಹ ಯೋಜನೆಯನ್ನು ಕೈಬಿಟ್ಟು ದೇವಸ್ಥಾನದ ಅಭಿವ್ರದ್ದಿ ಹೆಸರಿನಲ್ಲಿ ಯಾರೂ ಕೂಡ ಯಾವುದೇ ರೀತಿಯಲ್ಲಿ ಹಣ ಲೂಟಿ ಮಾಡುವ ಪ್ರವ್ರತ್ತಿ ಯಾಗದಂತೆ ಸದರಿ ಇರುವಂತೆ ದರ್ಶನ ಪಡೆಯಲು ಅವಕಾಶ ಮಾಡಬೇಕು ಮತ್ತು ವಿಶೇಷದಿನ ಹಾಗೂ ವಾರಾಂತ್ಯಕ್ಕೆ ರಾಜಕಾರಣಿಗಳಿಗೆ ನಿರ್ದಿಷ್ಟ ಸಮಯ ನಿಗದಿಪಡಿಸಿದರೆ ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಆಗುವ ತೊಂದರೆಯನ್ನ ತಪ್ಪಿಸಬಹುದು ಎಂದು ಎಲ್ಲಾ ಪ್ರವಾಸಿಗರ ಹಾಗೂ ಭಕ್ತಾದಿಗಳ ಪರವಾಗಿ ಸರ್ಕಾರಕ್ಕೆ ಎಂದು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಕೆ ಮಹೇಶ್ ಕಾಮತ್ ವಿನಂತಿಸಿಕೊಂಡಿದ್ದಾರೆ.