ರಾಮನಗರ: ಜಿಲ್ಲೆಯ ಚನ್ನಪಟ್ಟಣ ಟೌನಿನ ಪೇಟೆಯ ನಿವಾಸಿ ಮಂಜುನಾಥ (೩೬ ವರ್ಷ) ಕಾಣೆಯಾಗಿದ್ದಾರೆ ಎಂದು ಪೊಲೀಸ್‌ಠಾಣೆಗೆ ದೂರು ದಾಖಲಾಗಿದೆ.
ಚಹರೆಯ ವಿವರ:- ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡುಮುಖ, ೫.೬ ಅಡಿ ಎತ್ತರ, ಬಲಗೈ ತೋಳಿನ ಮೇಲೆ ಅಮ್ಮ ಎಂಬ ಹಸಿರು ಹೆಚ್ಚೆ ಇರುತ್ತದೆ. ಇವರುಕಾಣೆಯಾಗುವಾಗ ಕ್ರೀಂ ಬಣ್ಣದತುಂಬು ತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.ಇವರುಕಂಡು ಬಂದರೆ ಆರಕ್ಷಕ ಉಪನಿರೀಕ್ಷಕರು, ಚನ್ನಪಟ್ಟಣ ಪುರಪೊಲೀಸ್ ಠಾಣೆ, ಚನ್ನಪಟ್ಟಣ, ರಾಮನಗರ ಜಿಲ್ಲೆ ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.