Saturday, June 7, 2025
Google search engine

Homeರಾಜಕೀಯಕಾಂಗ್ರೆಸ್ ಮುಸ್ಲಿಂ ಮುಖಂಡರ ರಾಜೀನಾಮೆ ವಾಪಸ್ ಪಡೆಯಲು ಮನವಿ: ಬಿ.ಕೆ. ಹರಿ ಪ್ರಸಾದ್

ಕಾಂಗ್ರೆಸ್ ಮುಸ್ಲಿಂ ಮುಖಂಡರ ರಾಜೀನಾಮೆ ವಾಪಸ್ ಪಡೆಯಲು ಮನವಿ: ಬಿ.ಕೆ. ಹರಿ ಪ್ರಸಾದ್

ಮಂಗಳೂರು (ದಕ್ಷಿಣ ಕನ್ನಡ):’ಕಾಂಗ್ರೆಸ್ ನ ಮುಸ್ಲಿಂ ಮುಖಂಡರ ರಾಜೀನಾಮೆ ವಾಪಾಸ್ ಗೆ ಮನವಿ ಮಾಡಲಾಗಿದೆ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ನಾನು ಸಭೆ ನಡೆಸಲು ಬಂದಿಲ್ಲ, ಪ್ರತೀ ಸಾರಿ ಬರೋ ಹಾಗೆ ಯಥಾ ಪ್ರಕಾರ ಬಂದಿದ್ದೇನೆ. ಕೆಲವು ನಡೆಯಬಾರದ ಘಟನೆ ನಡೆದಿದೆ, ಯಾರೂ ದೃತಿಗೆಡೋದು ಬೇಡ ಅಂತ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ. ಉಸ್ತುವಾರಿ ಮಾಡ್ತಾರೆ ಅನ್ನೋ ಊಹಾಪೋಹಗಳನ್ನ ಬಿಟ್ಟು ಬಿಡಿ ಎಂದರು.

ಮುಖ್ಯಮಂತ್ರಿಗಳದ್ದು ಸೌಜನ್ಯದ ಭೇಟಿ. ಮಂಗಳೂರನ್ನ ಮಣಿಪುರ ಮಾಡಬೇಡಿ ಅಂತ ಹೇಳೋದಷ್ಟೇ ಎಂದ ಅವ್ರು ಇಡೀ ರಾಜ್ಯದಲ್ಲಿ ಶಾಂತಿ ನೆಲೆಸಿರುವಾಗ ಕರಾವಳಿಯಲ್ಲಿ ಯಾಕೆ ಹೀಗಾಗ್ತಿದೆ ಅನ್ನೋದನ್ನ ನೋಡಬೇಕಿದೆ. ಅಮಾಯಕರನ್ನ ಹೋಗಿ ಸಾಯಿಸೋಕೆ ಇದು ಉತ್ತರಪ್ರದೇಶ,‌ ಮಣಿಪುರ ಅಲ್ಲ ಎಂದರು. ಇದರ ಬಗ್ಗೆ ಕ್ರಮ ತೆಗೋಳಿ ಅಂದಾಗ ಅವರೇ ಸ್ವಲ್ಪ ಹದಗೆಟ್ಟಿದೆ ಸರಿ ಮಾಡ್ತೀವಿ ಅಂದರು. ನೀವು ಹೋಗಿ ಕಾಂಗ್ರೆಸ್ ಕಾರ್ಯಕರ್ತರ ಬಳಿ ಮಾತನಾಡಿ ಅಂದರು. ನಾವು ನ್ಯಾಯದ ಪರ ಇದ್ದೀವಿ, ಕಾಂಗ್ರೆಸ್ ಕಾರ್ಯಕರ್ತರು ಧೃತಿಗೆಡಬೇಡಿ. ಸಂವಿಧಾನ ಮತ್ತು ನ್ಯಾಯದ ಪರ ಇದೀವಿ, ಹಾಗಾಗಿ‌ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಲು ಬಂದಿದ್ದೇನೆ. ರಾಜೀನಾಮೆ ಬೇಕಾಗಿಲ್ಲ, ವಾಪಾಸ್ ತೆಗೋಳಿ ಅಂದರು.

RELATED ARTICLES
- Advertisment -
Google search engine

Most Popular