Sunday, April 6, 2025
Google search engine

Homeರಾಜ್ಯಸುದ್ದಿಜಾಲ“ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್”ಗೆ ಅರ್ಜಿ ಆಹ್ವಾನ

“ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್”ಗೆ ಅರ್ಜಿ ಆಹ್ವಾನ

ರಾಮನಗರ:ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಜಾನಪದ ಲೋಕದಲ್ಲಿ ೨೦೨೩-೨೦೨೪ರ ಶೈಕ್ಷಣಿಕ ಸಾಲಿಗೆ ಕನಿಷ್ಟ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳಿಂದ “ಜಾನಪದ ಮತ್ತು ಪ್ರದರ್ಶಕ ಕಲೆಗಳ ಡಿಪ್ಲೊಮಾ ಕೋರ್ಸ್”ಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಈ ಜಾನಪದ ಡಿಪ್ಲೊಮಾವು ಒಂದು ವರ್ಷದ ಅವಧಿಯದ್ದಾಗಿದ್ದು, ಪ್ರತಿ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ತರಗತಿಗಳು ನಡೆಯಲಿವೆ. ಕಲೆಗಳ ತರಬೇತಿ ಹಾಗೂ ಕಲಿಕೆಯ ಪ್ರಾತ್ಯಕ್ಷಿತೆಗಳನ್ನೊಳಗೊಂಡ ಈ ಡಿಪ್ಲೊಮಾ ಕೋರ್ಸ್ ವಿಶಿಷ್ಟ ಸ್ವರೂಪದಲ್ಲಿರುತ್ತದೆ. ಆಸಕ್ತರು ೩೧/೦೮/೨೦೨೩ರ ಒಳಗಾಗಿ ಜಾನಪದ ಲೋಕ, ಬೆಂಗಳೂರು-ಮೈಸೂರು ಹೆದ್ದಾರಿ, ಐಜೂರು ಅಂಚೆ, ರಾಮನಗರ, ರಾಮನಗರ ಜಿಲ್ಲೆ. ದೂರವಾಣಿ-೭೭೯೫೬೩೨೨೯೪ ಅಥವಾ ಕರ್ನಾಟಕ ಜಾನಪದ ಪರಿಷತ್ತು, ಜಾನಪದ ಸಿರಿಭುವನ, ನಂ.೧, ಜಲದರ್ಶಿನಿ ಬಡಾವಣೆ, ಎಂ.ಎಸ್.ರಾಮಯ್ಯ ಆಸ್ಪತ್ರೆ ಮಹಾದ್ವಾರದ ಹತ್ತಿರ, ನ್ಯೂ ಬಿಇಎಲ್‌ರಸ್ತೆ, ಬೆಂಗಳೂರು – ೫೬೦ ೦೫೪, ದೂರವಾಣಿ -೦೮೦- ೨೩೬೦೫೦೩೩– ಇಲ್ಲಿ ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ನೀಡುವುದು.

RELATED ARTICLES
- Advertisment -
Google search engine

Most Popular