ಮೈಸೂರು: ವಿಕಲಚೇತನರಿಗೆ ಉದ್ಯೋಗ ಕೇಂದ್ರಿತ ಉಚಿತ ತರಬೇತಿಗೆ ಸಮರ್ಥನಂ ಅಂಗವಿಕಲತರ ಸಂಸ್ಥೆ ಅರ್ಜಿ ಆಹ್ವಾನಿಸಲಾಗಿದೆ. ದೈಹಿಕ, ದೃಷ್ಠಿ, ವಾಕ್ ಮತ್ತು ಶ್ರವಣ ನ್ಯೂನತೆ ಇರುವ ವಿಕಲಚೇತನರು ಅರ್ಜಿ ಸಲ್ಲಿಸಬಹುದು.
ಕನಿಷ್ಠ 10ನೇ ತರಗತಿ ಉತೀರ್ಣರಬೇಕು, 18 ರಿಂದ 30 ವರ್ಷದ ಒಳಗಿನ ವಯಸ್ಸಿನ ವಿಕಲಚೇತನರು ಅರ್ಜಿ ಸಲ್ಲಿಸಬಹುದಾಗಿದೆ. ಸದರಿ ತರಬೇತಿಯು ಜುಲೈ ಮೊದಲನೇ ವಾರದಿಂದ ಪ್ರಾರಂಭವಾಗಿದ್ದು, ತರಬೇತಿ, ಪಠ್ಯಕ್ರಮ, ಊಟ ಮತ್ತು ವಸತಿ, ಮತ್ತು ಪ್ರಮಾಣಪತ್ರ ಎಲ್ಲಾವೂ ಉಚಿತವಾಗಿರುತ್ತದೆ. ತರಗತಿಯ ಅವಧಿಯು 3 ತಿಂಗಳು ಇರುತ್ತದೆ.
ಸಮರ್ಥನಂ ಅಂಗವಿಕಲರ ಸಂಸ್ಥೆ ವಿಕಲಚೇತನರಿಗೆ ತರಬೇತಿ ನೀಡುವಲ್ಲಿ 22 ವರ್ಷಗಳ ಸುದೀಘವಾದ ಅನುಭವ, ನುರಿತ ಹಾಗೂ ಅನುಭವವುಳ್ಳ ತರಬೇತಿದಾರರು, ಪ್ರತಿಯೊಬ್ಬ ತರಬೇತಿಗೂ ವೈಯಕ್ತಿಕ ಗಮನ ಜೊತೆಗೆ ಸುಸಜ್ಜಿತ ತರಬೇತಿ ಕೇಂದ್ರ, ಉತ್ತಮ ಪೌಷ್ಠಕ ಆಹಾರ ಹಾಗೂ ವಸತಿ ಸೌಲಭ್ಯಗಳು ಅಲ್ಲದೇ ಉದ್ಯೋಗ ದೊರಕಿಸುವಲ್ಲಿ ಬೆಂಬಲ ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ 9449864693, 0806833399, 6364867818 ಸಂಪರ್ಕಿಸ ಬಹುದು.