ಮಂಗಳೂರು(ದಕ್ಷಿಣ ಕನ್ನಡ): 2023-24ನೇ ಸಾಲಿಗೆ ಮೀನುಗಾರಿಕೆ ನಾಡದೋಣಿಗಳು ಸಹಾಯಧನದ ಸೀಮೆಎಣ್ಣೆ ಪಡೆಯಲು ಮೀನುಗಾರಿಕೆ ಲೈಸೆನ್ಸ್ ಮತ್ತು ಸೀಮೆಎಣ್ಣೆ ರಹದಾರಿಯ ನವೀಕರಣಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಸಂಬಂಧಿಸಿದ ದೋಣಿ ಮಾಲೀಕರು ಸಂಬಂಧಪಟ್ಟ ದಾಖಲೆಗಳೊಂದಿಗೆ ಸೆಪ್ಟೆಂಬರ್ 5 ರೊಳಗೆ ತಮ್ಮ ವ್ಯಾಪ್ತಿಗೆ ಬರುವ ಸೀಮೆಎಣ್ಣೆ ಬಂಕ್‍ಗಳಿಗೆ ಅಗತ್ಯ ದಾಖಲೆಗೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ದೋಣಿ ಮತ್ತು ಇಂಜಿನ್ ನ ತಪಾಸಣೆಯನ್ನು ಸಪ್ಟೆಂಬರ್ 11ರಂದು ಹಮ್ಮಿಕೊಳ್ಳಲಾಗಿದೆ. ದೋಣಿ ಮಾಲೀಕರು ದೋಣಿಯ ನೋಂದಣಿ ಪತ್ರದ ಪ್ರತಿ, ಆಧಾರ್ ಪ್ರತಿ ಅಥವಾ ಮತದಾರರ ಗುರುತಿನ ಚೀಟಿ ಪ್ರತಿಯೊಂದಿಗೆ ತಮ್ಮ ಹತ್ತಿರದ ನಿಗದಿತ ಸ್ಥಳದಲ್ಲಿ ದೋಣಿಯ ಇಂಜಿನ್ ಅನ್ನು ತಪಾಸಣೆಗೆ ಹಾಜರುಪಡಿಸಬೇಕು. ಉಳ್ಳಾಲ, ಸುಲ್ತಾನ್ ಬತ್ತೇರಿ, ತೋಟ ಬೆಂಗ್ರೆ, ಕಸಬಾಬೆಂಗರೆ, ಬಂಗ್ರಾಕುಳೂರು, ಪಣಂಬೂರು, ಮೀನಕಳಿಯ, ಚಿತ್ರ್ರಾಪುರ, ಬೈಕಂಪಾಡಿ, ಕುಲಾಯಿ, ಹೊಸಬೆಟ್ಟು, ಸುರತ್ಕಲ್, ಗುಡ್ಡೆಕೊಪ್ಲ, ಸಸಿಹಿತ್ಲು, ಮತ್ತು ಮುಕ್ಕ ಸ್ಥಳದಲ್ಲಿ ತಪಾಸಣೆ ನಡೆಸಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.