ಹುಣಸೂರು: ತಾಲೂಕಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಗೌರವಧನ ಆಧಾರದ ಮೇಲೆ ಅರ್ಜಿ ಆಯ್ಕೆ ಮಾಡಲು ಆಹ್ವಾನ ನೀಡಲಾಗಿದೆ ಎಂದು ಸಿಡಿಪಿಒ ಹರೀಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಶಿಶು ಅಭಿವೃದ್ಧಿ ಯೋಜನನಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗೆ ಗೌರವಧನ ಆಧಾರದ ಮೇಲೆ ಆಯ್ಕೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಆದೇಶ್ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅದರಂತೆ ತಾಲೂಕಿನಲ್ಲಿ 13 ಅಂಗನವಾಡಿ ಕಾರ್ಯಕರ್ತೆ ಮತ್ತು 56 ಅಂಗನವಾಡಿ ಸಹಾಯಕಿರ ಗೌರವಧನ ಹುದ್ದೆಗಳು ಖಾಲಿ ಇದ್ದು ನಿಯಮಾನುಸಾರ ಅರ್ಹ ಅಭ್ಯಾರ್ಥಿಗಳು ಅನ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಅರ್ಜಿ ಸಲ್ಲಿಸಲು 08.11.2025ರಿಂದ ದಿನಾಂಕ 08.12.25.ಸಂಜೆ 5.30. ವರೆಗೆ ಅವಕಾಶವಿರುತ್ತದೆ. ಅನ್ಲೈನ್ ವೆಬ್‌ಸೈಟ್ ವಿಳಾಸ https//karnemakaone.kar.nic.in/abcd ಆಗಿರುತ್ತದೆ ಎಂದು ತಿಳಿಸಿದ್ದಾರೆ.



