ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸರ್ಕಾರದ ಯೋಜನೆಗಳನ್ನು ಮತ್ತು ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸಲು ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಿ ಎಂದು ಚುಂಚನಕಟ್ಟೆ ನಾಡಕಚೇರಿ ಉಪ ತಹಸೀಲ್ದಾರ್ ಕೆ.ಜೆ.ಶರತ್ ಕುಮಾರ್ ಹೇಳಿದರು.
ಚುಂಚನಕಟ್ಟೆ ನಾಡಕಚೇರಿಯಲ್ಲಿ ಸಕಾಲ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಒಂದೇ ದಿನದಲ್ಲಿ ಸವಲತ್ತು ಮಂಜೂರು ಪತ್ರ ವಿತರಿಸಿ ನಂತರ ಅವರು ಮಾತನಾಡಿದರು. ದೂರದ ಊರುಗಳಿಂದ ಸಕಾಲದಲ್ಲಿ ವಾಸ್ಥಸ್ಥಳ, ಆದಾಯ, ವಂಶ ವೃಕ್ಷ, ವಿಧವಾ ವೇತನ, ಸೇರಿ ಇತರೆ ಪ್ರಮಾಣಗಳನ್ನು ಪಡೆಯಲು
ಅರ್ಜಿ ಸಲ್ಲಿಸಲು ಬರುವ ಸಾರ್ವಜನಿಕರು ಸೂಕ್ತ ದಾಖಲೆಗಳನ್ನು ಒದಗಿಸಿ ಕೊಟ್ಟರೇ ಅವುಗಳನ್ನು ಪರೀಶೀಲನೆ ಮಾಡಿ ಒಂದೇ ದಿನದಲ್ಲಿ ಮಂಜೂರಾತಿ ಮಾಡಲು ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಶ್ರಮಿಸುತ್ತಿದ್ದು ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಚಿದಾನಂದ್ ಬಾಬು, ವಿಷಯ ನಿರ್ವಾಹಕಿ ಎಸ್.ವಿ.ಭಾಗ್ಯಲಕ್ಷ್ಮಿ , ಸಿಬ್ಬಂಗಳಾದ ಮಧುಶ್ರೀ, ಕೆಸ್ತೂರುವಿಜಿ, ರವೀಶ್, ಸೇರಿದಂತೆ ಮತ್ತಿತರರು ಹಾಜರಿದ್ದರು