ಕೆ.ಆರ್.ನಗರ: ಕೆ.ಆರ್.ನಗರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಪತ್ತಿನ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್‌ಗೆ ಸರ್ಕಾರದ ನಾಮ ನಿರ್ದೇಶನ ನಿರ್ದೇಶಕರನ್ನಾಗಿ ಹೆಚ್.ಕೆ.ಪ್ರದೀಪ್‌ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಜಿ.ರಂಗನಾಥ್ ಆದೇಶ ಹೊರಡಿಸಿದ್ದಾರೆ. ವಕೀಲರಾಗಿರುವ ಇವರ ನೇಮಕಕ್ಕೆ ಕಾರಣಕರ್ತರಾದ ಶಾಸಕ ಡಿ.ರವಿಶಂಕರ್ ಅವರಿಗೆ ಪ್ರದೀಪ್‌ಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ.