Friday, April 4, 2025
Google search engine

Homeರಾಜ್ಯಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ 11 ಮಂದಿ ಪತ್ರಕರ್ತರ ನೇಮಕ

ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ 11 ಮಂದಿ ಪತ್ರಕರ್ತರ ನೇಮಕ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿ ಶಿವಾನಂದ ತಗಡೂರು ಸೇರಿ 11 ಜನ ಪತ್ರಕರ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಕರ್ನಾಟಕ ಸಚಿವಾಲಯ ಆದೇಶ ಹೊರಡಿಸಿದ್ದು, ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ 11 ಜನ ಹಿರಿಯ ಪತ್ರಕರ್ತರು ಮತ್ತು ವರದಿಗಾರರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಹಾಗೆಯೇ ಇದರ ಜೊತೆಗೆ ಪದನಿಮಿತ್ತ ಸದಸ್ಯರನ್ನೂ ಸಹ ನೇಮಕ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಈ ಸದಸ್ಯರು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಮಾಧ್ಯಮ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡವರ ಹೆಸರು

  • ಶಿವಾನಂದ ತಗಡೂರು, ಬೆಂಗಳೂರು
  • ಎಂ.ಇ. ಮಂಜುನಾಥ್, ದಾವಣಗೆರೆ
  • ಸಂಗಮೇಶ ಚೂರಿ, ವಿಜಯಪುರ
  • ಶೋಭಾ ಎಂ.ಸಿ, ಬೆಂಗಳೂರು
  • ಜೆ. ಅಬ್ಬಾಸ್‌ ಮುಲ್ಲಾ, ಧಾರವಾಡ
  • ಹೆಚ್.ವಿ. ಕಿರಣ್, ಬೆಂಗಳೂರು
  • ಅನಿಲ್ ವಿ. ಗೆಜ್ಜಿ, ಬೆಂಗಳೂರು
  • ಕೆಂಚೇಗೌಡ, ಬೆಂಗಳೂರು
  • ಯು. ಸುರೇಂದ್ರ ಶೆಣೈ, ಉಡುಪಿ
  • ರವಿ ಕೋಟಿ, ಮೈಸೂರು
  • ರಶ್ಮಿ ಎಸ್, ಬೆಂಗಳೂರು

ಪದನಿಮಿತ್ತ ಸದಸ್ಯರು

ಮೈಸೂರು ಮಾನಸ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು.

ಮಂಗಳೂರು ಮಂಗಳ ಗಂಗೋತ್ರಿ ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು.

ದಾವಣಗೆರೆ ವಿಶ್ವ ವಿದ್ಯಾನಿಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು.

ನಿರ್ದೇಶಕರು, ಆಕಾಶವಾಣಿ, ಬೆಂಗಳೂರು

ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಬೆಂಗಳೂರು.

ಕರ್ನಾಟಕ ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ

RELATED ARTICLES
- Advertisment -
Google search engine

Most Popular