ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ಶಿಕ್ಷಣ ವಿಭಾಗದ ಡಾ.ಸಾಹೇಬ ಅಲಿ ಎಚ್.ನಿರುಗುಡಿ ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಕುಲಪತಿಯಾಗಿದ್ದ ಪ್ರೊ.ಸಿದ್ದು ಪಿ ಆಲಗೂರು ಅವರು ಅಧಿಕಾರವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಸರ್ಕಾರ ಪ್ರಭಾರ ಕುಲಪತಿಯಾಗಿ ಡಾ.ಸಾಹೇಬ ಅಲಿ ಎಚ್ ನಿರುಗುಡಿ ಅವರನ್ನ ನೇಮಕ ಮಾಡಿ ಆದೇಶಮಾಡಿದ್ದು, ಇಂದು ಕುಲಪತಿ ಪ್ರೊ ಸಿದ್ದು ಪಿ ಆಲಗೂರ ಅವರಿಂದ ಡಾ.ಸಾಹೇಬ ಅಲಿ ಎಚ್ ನಿರುಗುಡಿ ಅವರಿಗೆ ಅಧಿಕಾರ ಸ್ವೀಕರಿಸಿದರು.