ಗುಂಡ್ಲುಪೇಟೆ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಶಂಭುಲಿಂಗಸ್ವಾಮಿ ರವರ ಕಾರ್ಯ ವೈಖರಿಯನ್ನು ಮೆಚ್ಚಿ ಪಕ್ಕದ ತಮಿಳುನಾಡು ರಾಜ್ಯದ ಕೊಯಮತ್ತೂರು ಡಿಐಜಿಪಿ ಎ. ಸರವಣ ಸುಂದರ (ಐಪಿಎಸ್) ಅವರು ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ರಾಜ್ಯ ಅಂತರಾಜ್ಯ, ಜಿಲ್ಲಾ, ಅಂತರ್ಜಿಲ್ಲಾ ಮಟ್ಟದ ಹಾಗೂ ಸ್ಥಳೀಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟುವಲ್ಲಿ ಗುಂಡ್ಲುಪೇಟೆ ಪೊಲೀಸರು ಎತ್ತಿದ ಕೈ ಎಂಬುದು ಸಾಬೀತಾಗಿದೆ. ಅದರಲ್ಲೂ ತಂತ್ರಜ್ಞಾನ ಆಧಾರಿತವಾಗಿ ‘ಅಪರಾಧಿಗಳನ್ನು ಬಲೆಗೆ ಕೆಡವುದರಲ್ಲಿ ಪೊಲೀಸ್ ಶಂಭುಲಿಂಗಸ್ವಾಮಿ ಚಾಣಾಕ್ಷತೆ ಮೆಚ್ಚುವಂತಹದ್ದಾಗಿದ್ದು ಇದೀಗ ತಮಿಳುನಾಡಿನ ಕೊಯಮತ್ತೂರು ವಲಯದ ಡಿ.ಐ.ಜಿ.ಪಿಯವರಿಂದ ಪ್ರಶಂಸನಾ ಪತ್ರ ಬಂದಿರುವುದು ಬದ್ದತೆಯ ಕರ್ತವ್ಯಕ್ಕೆ ಮತ್ತಷ್ಟು ಗೌರವ ಸಂದಿದೆ.
ಪೋಲಿಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ, ಪಿಎಸ್‌ಐಗಳಾದ ಸಾಹೇಬಗೌಡ,ಶಿವಶಂಕರಪ್ಪ,ಜಯರಾಮ್, ಪೊಲೀಸ್ ಪೇದೆ ಪ್ರಭು,ರೇವಣ್ಣಸ್ವಾಮಿ,ಗಂಗಾಧರ್, ರವಿ ಹಾಗೂ ಅಧಿಕಾರಿಗಳು ಸಿಬ್ಬಂದಿಗಳು, ಊರಿನ ನಾಗರೀಕರು ಅಭಿನಂದಿಸಿದ್ದಾರೆ.
