Friday, April 4, 2025
Google search engine

Homeರಾಜಕೀಯಜೂ.10 ರಂದು ವರುಣಾ ಮತದಾರರಿಗೆ ಸಿಎಂ ಸಿದ್ಧರಾಮಯ್ಯರಿಂದ ಕೃತಜ್ಞತಾ ಸಭೆ

ಜೂ.10 ರಂದು ವರುಣಾ ಮತದಾರರಿಗೆ ಸಿಎಂ ಸಿದ್ಧರಾಮಯ್ಯರಿಂದ ಕೃತಜ್ಞತಾ ಸಭೆ

ಮೈಸೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ತಮ್ಮನ್ನು ಕೈಹಿಡಿದ ವರುಣಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ  ಮುಂದಾಗಿದ್ದಾರೆ.

ವರುಣಾ ಕ್ಷೇತ್ರದಿಂದ ಗೆಲುವು ಸಾಧಿಸಿ ಸಿಎಂ ಹುದ್ದೆಗೇರಿರುವ ಸಿದ್ಧರಾಮಯ್ಯ ಅವರು ಇದಕ್ಕೆ ಕಾರಣರಾದ ಕ್ಷೇತ್ರ ಜನರಿಗೆ  ಜೂನ್ 10ರಂದು ಕೃತಜ್ಞತಾ ಸಭೆ ಆಯೋಜಿಸಿದ್ದಾರೆ.  ವರುಣ ಕ್ಷೇತ್ರ ವ್ಯಾಪ್ತಿಯ ಬಿಳಿಗೆರೆ ಗ್ರಾಮದಲ್ಲಿ ಕಾರ್ಯಕ್ರಮ  ನಡೆಯಲಿದೆ.

ಸಿಎಂ ಆದ ಬಳಿಕ ಮೊದಲ ಬಾರಿಗೆ ತವರು ಜಿಲ್ಲೆಗೆ  ಸಿದ್ಧರಾಮಯ್ಯ ಆಗಮಿಸುವ  ಹಿನ್ನಲೆ,  ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ ಕೋರಲು ಕಾಂಗ್ರೆಸ್ ಮುಖಂಡರು ಸಿದ್ಧತೆ  ನಡೆಸುತ್ತಿದ್ದಾರೆ.

ಈ ಹಿನ್ನಲೆ ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರಿಂದ ಪೂರ್ವಭಾವಿ ಸಭೆ ನಡೆಯಿತು. ವಿವಿಧ ಕಲಾ ತಂಡಗಳ ಮೂಲಕ ಸಿದ‍್ಧರಾಮಯ್ಯಗೆ ಸ್ವಾಗತ ಕೋರುವುದು ಮತ್ತು ಕಾರ್ಯಕ್ರಮಕ್ಕೆ 50ಸಾವಿರ ಜನ  ಕರೆ ತರಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಮೂರ್ತಿ, ಕಾಂಗ್ರೆಸ್ ಮುಖಂಡರಾದ ಮರೀಗೌಡ, ಮಂಜುಳಾ ಮಾನಸ ಸೇರಿದಂತೆ ಇತರರು ಭಾಗಿಯಾಗಿದ್ದರು.

RELATED ARTICLES
- Advertisment -
Google search engine

Most Popular