Friday, April 18, 2025
Google search engine

Homeರಾಜ್ಯಪೊಲೀಸ್ ಠಾಣೆಗೆ ಬರುವ ನಾಗರಿಕರಿಗೆ ಸೂಕ್ತ ಸ್ಪಂದನೆ: ಮಂಡ್ಯ ನೂತನ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ

ಪೊಲೀಸ್ ಠಾಣೆಗೆ ಬರುವ ನಾಗರಿಕರಿಗೆ ಸೂಕ್ತ ಸ್ಪಂದನೆ: ಮಂಡ್ಯ ನೂತನ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ

ಮಂಡ್ಯ: ಪೊಲೀಸ್‌ ಠಾಣೆಗೆ ಬರುವ ನಾಗರಿಕರಿಗೆ ಸೂಕ್ತ ಸ್ಪಂದನೆ ಸಿಗಬೇಕು.  ಪೊಲೀಸ್‌ ಠಾಣೆಗೆ ಬಂದವರಿಗೆ ಸರಿಯಾದ ಗೌರವ, ಮಾಹಿತಿ ಸಿಗುತ್ತಿಲ್ಲ.  ದೂರು ನೀಡಲು ಬಂದರೆ ದೂರು ದಾಖಲಿಸುವುದಿಲ್ಲ ಎಫ್‌ಐಆ‌ರ್ ಮಾಡುವುದಿಲ್ಲ ಎಂಬ ಬಗ್ಗೆ ದೂರುಗಳಿವೆ. ಇದನ್ನು ಹೋಗಲಾಡಿಸಿ ನಾಗರಿಕರಿಗೆ ಸೂಕ್ತ ಸ್ಪಂದನೆ ಸಿಗುವಂತೆ ಪೊಲೀಸ್ ವ್ಯವಸ್ಥೆ ಕಲ್ಪಿಸಲಾಗುವುದು  ಎಂದು ಮಂಡ್ಯ ನೂತನ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ, ಮತ್ತು ಭಾರತೀಯ ಸಾಕ್ಷಾ ಅಧಿನಿಯಮ ಮೂರು ಹೊಸ ಆ್ಯಕ್ಟ್ ಬಂದಿದೆ. ನಮ್ಮ ಅಧಿಕಾರಿಗಳು, ಸಿಬ್ಬಂದಿಗಳಿಗೆ ಚಾಲೆಂಜಿಂಗ್ ಆಗಿದೆ‌. ಟ್ರೈನಿಂಗ್ ನಲ್ಲಿ ಕಲಿತ ಸೆಕ್ಷನ್ ಬದಲಾಗಿವೆ. ಕೆಲವು ಸೆಕ್ಷನ್ ಗಳ ರೂಪ ಬದಲಾಗಿದೆ‌, ಹೊಸ ಅಪರಾಧಗಳು ಸೇರ್ಪಡೆಯಾಗಿದೆ. FIR ನಲ್ಲಿ ಯಾವ ರೀತಿ ಕಾಲಂ ಅಳವಡಿಸುವ ಬಗ್ಗೆ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕಳೆದ ಒಂದು ವಾರದಿಂದ ಹೊಸ ಆ್ಯಕ್ಟ್ ಪ್ರಕಾರ ಎಪ್.ಐ.ಆರ್. ದಾಖಲಾಗುತ್ತಿದೆ. ಸಾರ್ವಜನಿಕರ ದೂರನ್ನ ಪರಿಗಣಿಸಿ ಸೂಕ್ತವಾದ ನ್ಯಾಯ ಕೊಡಿಸಿ. ಯಾವುದೇ ರೀತಿಯಲ್ಲಿ ತಡವಾಗಿ ಪ್ರಕರಣ ದಾಖಲಾಗದಂತೆ ಸೂಚನೆ. ಪೊಲೀಸ್ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸೂಚನೆ ಕೊಟ್ಟಿದ್ದೇನೆ ಎಂದರು.

‘ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ರೌಡಿಸಂ ಗೆ ಬ್ರೇಕ್.’!!

ರೌಡಿಸಂ ಹಾಗೂ ಅಕ್ರಮ ಚಟುವಟಿಕೆ ತಡೆಗೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಬದ್ದ ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಾನೂನು ಬಾಹಿರ ಕೃತ್ಯ ನಡೆಸುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಣ್ಣಪುಟ್ಟ ಪುಡಿ ರೌಡಿಗಳು ಹುಡುಗಿಯರ ಚುಡಾಯಿಸುವುದು. ಸಣ್ಣ ಮಟ್ಟದಲ್ಲಿ ಗ್ರಾಮದಲ್ಲಿ ಹವಾ ಮೆಂಟೆನ್ ಮಾಡುವಂತವರು. ಸಾರ್ವಜನಿಕ ಪ್ರದೇಶದಲ್ಲಿ ಭಯ ಹುಟ್ಟಿಸುವುದು. ಲಾಂಗ್, ಮಚ್ಚು, ಹಿಡಿದು ಓಡಾಡುವವರಿಗೆ ರೌಡಿ ಸೀಟ್ ತೆರೆಯಲಾಗುತ್ತೆ. ಜೊತೆಗೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಅಕ್ರಮ ಚಟುವಟಿಕೆ ಗ್ಯಾಂಬ್ಲಿಂಗ್, ಕ್ಲಬ್, ಮಟ್ಕಾ, ಕ್ರೀಕೆಟ್ ಬೆಡ್ಡಿಂಗ್, ವೆಶ್ಯಾವಾಟಿಕೆ, ಡ್ರಗ್ಸ್ ತಡೆಗೆ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಸಪ್ಲೈ ಮಾಡ್ತಿದ್ದಾರೆ ಅನ್ನೋ ದೂರು ಇದೆ ಅಂತವರ ಗುರ್ತಿಸಿ ಹೆಚ್ಚಿನ ರೀತಿಯ ಕ್ರಮಕ್ಕೆ ಸೂಚನೆ ನೀಡಿರುವುದಾಗಿ ತಿಳಿಸಿದರು.

ಡ್ರಗ್ಸ್ ನಿಯಂತ್ರಣಕ್ಕೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ, ಅರಿವು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಸಮಾಜದಿಂದ ಡ್ರಗ್ಸ್ ಪಿಡುಗು ತೊಲಗಿಸಬೇಕು. ನಗರದಲ್ಲಿ ರಾತ್ರಿಯ ವೇಳೆ ಪೊಲೀಸ್ ಬೀಟ್ ವ್ಯವಸ್ಥೆ, ಪೆಟ್ರೊಲಿಂಗ್ ವ್ಯವಸ್ಥೆ ಮಾಡಲಾಗುವುದು ಎಂದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ದಾಖಲಾಗುತ್ತಿದೆ. ಮೊಬೈಲ್ ನಲ್ಲಿ ಫೇಕ್ ಸೈಟ್ ಗಳಲ್ಲಿ ಹಣ ಎಗರಿಸುವ ಕೆಲಸ ಆಗ್ತಿದೆ. 1930 ಹೆಲ್ಪ್ ಲೈನ್ ಕರೆ ಮಾಡಿ ಪ್ರಕರಣ ಪತ್ತೆ ಹಚ್ಚುವ ಕೆಲಸ ಮಾಡಲಾಗುದುವುದು. ಮುಂದಿನ ದಿನಗಳಲ್ಲಿ ನಮ್ಮದೆ ತಂತ್ರಜ್ಞಾನ ಅಳವಡಿಸಿಕೊಂಡು ಪತ್ತೆ ಕಾರ್ಯ ಮಾಡುತ್ತೇವೆ. ಯಾವುದಾದರೂ ಅಕ್ರಮ ಚಟುವಟಿಕೆ ಕಂಡು ಬಂದರೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

RELATED ARTICLES
- Advertisment -
Google search engine

Most Popular