Monday, April 21, 2025
Google search engine

Homeರಾಜಕೀಯಕೃಷಿ ಇಲಾಖೆಯಲ್ಲಿ ನೇಮಕಾತಿಗೆ ಅನುಮೋದನೆ: ಸಚಿವ ಚೆಲುವರಾಯಸ್ವಾಮಿ

ಕೃಷಿ ಇಲಾಖೆಯಲ್ಲಿ ನೇಮಕಾತಿಗೆ ಅನುಮೋದನೆ: ಸಚಿವ ಚೆಲುವರಾಯಸ್ವಾಮಿ

ಬೆಂಗಳೂರು: ನಮ್ಮ ಇಲಾಖೆಯಲ್ಲಿ ನೇಮಕಾತಿ ಒಂದು ಸಮಸ್ಯೆ ಇತ್ತು, ಇದೀಗ 750 ಜನರ ನೇಮಕಾತಿಗೆ ಅನುಮೋದನೆ ನೀಡಲಾಗಿದೆ ಎಂದು ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು,  ಎರಡ್ಮೂರು ಸಭೆ ಮಾಡಿದ್ದೇವೂ, ಇವತ್ತು ಕೂಡ ಇಲಾಖೆಯ ಅಧಿಕಾರಿಗಳ ಜೊತೆಯು ಸಭೆ ಮಾಡಿದ್ದೇವೆ. 100 ಕೃಷಿ ಅಧಿಕಾರಿಗಳು ಹಾಗೂ 650 ಸಹಾಯಕ ಕೃಷಿ ಅಧಿಕಾರಿಗಳನ್ನ‌ ನೇಮಕಾತಿ ಮಾಡಿಕೊಳ್ಳಲು ತಿರ್ಮಾನಿಸಿದ್ದೇವೆ. ಈಗಾಗಲೇ ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಯಿಂದಲೂ ಅನುಮೋದನೆ ಕೊಡಲಾಗಿದೆ. ಜೊತೆಗೆ 582 ಹುದ್ದೆಗಳಿಗೆ ಮುಂಬಡ್ತಿ ಕೊಟ್ಟಿದ್ದು, ಈ ಮೂಲಕ ಅಧಿಕಾರಿಗಳಿಗೆ ಉತ್ಸಾಹ ತುಂಬಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

ಇನ್ನು 223 ತಾಲೂಕುಗಳನ್ನ ಬರಗಾಲ ಎಂದು ಘೋಷಣೆ ಮಾಡಿದಾಗ ರೈತರಿಗೆ ಕೃಷಿ ಇಲಾಖೆ ಸಹಾಯ ಮಾಡಲು ನಿಂತಿದೆ. 200 ಕೋಟಿ ವೆಚ್ಚದಲ್ಲಿ 10 ಸಾವಿರ ಕೃಷಿ ಹೊಂಡ ಮಾಡಿದ್ದೇವೆ. ಕೃಷಿಯಲ್ಲಿ ಯಾಂತ್ರಿಕತೆಯನ್ನು ಪ್ರೋತ್ಸಾಹಿಸಲು 63, 785 ಫಲಾನುಭವಿಗಳಿಗೆ 284.92 ಕೋಟಿ ರೂ. ಸಹಾಯಧನ ಕೊಟ್ಟಿದ್ದೇವೆ. ರೈತರಿಗೆ ಯಂತ್ರೋಪಕರಣ ಪಡೆದುಕೊಳ್ಳಲು ಸರ್ಕಾರ ಮುಂದಾಗಿದ್ದು, 100 ಹೈಟೆಕ್ ಹಾರ್ವೆಸ್ಟರ್ ಹಬ್​​ಗೆ 50 ಕೋಟಿಗಳ ಅನುದಾನ ಒದಗಿಸಲಾಗಿದೆ. ನಾನು ಮತ್ತು ಕೃಷ್ಣ ಬೈರೇಗೌಡರು ದೆಹಲಿಗೆ ಹೋಗಿ ಅಧಿಕಾರಿಗಳು, ಮಂತ್ರಿಗಳನ್ನ ಭೇಟಿ ಮಾಡಿದ್ದೇವೆ. ಇನ್ನು ನಮಗೆ ಕೇಂದ್ರದಿಂದ ಪ್ರತಿಫಲ ಸಿಕ್ಕಿಲ್ಲ, ಆದ್ದರಿಂದ ರೈತರಿಗೆ ಬೆಳೆ ವಿಮೆಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ.

2.34 ಲಕ್ಷ ಫಲಾನುಭವಿಗಳಿಗೆ 484 ಕೋಟಿ ಸಹಾಯಧನ ನೀಡಲಾಗಿದೆ. ಕೃಷಿ ಮೇಳದಲ್ಲಿಯೇ ಬರೊಬ್ಬರಿ 150 ಕೋಟಿ ಮೌಲ್ಯದ 41 ಒಪ್ಪಂದಗಳು ಆಗಿವೆ. ಸರಿಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಇಲ್ಲಿಯವರೆಗೆ 8,521 ರೈತರಿಗೆ 8.56 ಕೋಟಿಗಳನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ. ನವ್ಯೋದ್ಯಮಗಳಿಗೆ ಉತ್ತೇಜನ ನೀಡಲು 10 ಕೋಟಿಗಳ ಅನುದಾನ ಒದಗಿದಲಾಗಿದ್ದು, ನವೋದ್ಯಮಗಳಿಗೆ ಪ್ರೊತ್ಸಾಹಿಸಲು 20 ಲಕ್ಷದಿಂದ 50 ಲಕ್ಷದವರೆಗೆ ಆರ್ಥಿಕ ನೆರವು ನಿಡಲಾಗುತ್ತಿದೆ. ರೈತರಿಗೆ ಕೃಷಿ ಇಲಾಖೆಯಿಂದ ವಿವಿಧ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು 1800-425-3553 ಸಹಾಯವಾಣಿ ಕೇಂದ್ರವನ್ನು ಕೂಡ ಸ್ಥಾಪಿಸಲಾಗಿದೆ. ಮೇ ನಲ್ಲಿ ಒಳ್ಳೆ ಮಳೆ ಆಗುತ್ತದೆ ಎಂದು ಹೇಳಲಾಗಿದೆ. ಅದಕ್ಕೆ ಬಿತ್ತನೆ ಬಿಜ, ಗೊಬ್ಬರ ಪೂರೈಸಲು ಸಿದ್ದತೆ ನಡೆಸಿದ್ದೇವೆ. ಮಂಡ್ಯ ಜಿಲ್ಲೆಗೆ ಒಂದು ಕೃಷಿ ವಿಶ್ವವಿದ್ಯಾಲಯ ಬೇಕು ಎಂದು ಬೇಡಿಕೆ ಇಟ್ಟಿದ್ದೇವೆ ಸಿಎಂ ಅವರು ವರದಿ ತರಿಸಿಕೊಂಡು ಮಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.

ಇನ್ನು ಜಾತಿ ಗಣತಿ ವಿಚಾರ,  ಈ ವರದಿಯನ್ನ ತೆಗದುಕೊಳ್ಳಬೇಡಿ ಎಂದು ನಾವು ಹೇಳಿಲ್ಲ, ಸಿಎಂ ಅವರಿಗೆ ಮನೆ ಮನೆಗೆ ಹೋಗಿ ವರದಿ ಮಾಡಿಲ್ಲ, ಈ ರೀತಿ ಆಗಿರುವಂತ ಲೋಪದೋಷಗಳನ್ನು ಸರಿ ಪಡಿಸುವಂತೆ ಸ್ವಾಮೀಜಿಗಳು ಹಾಗೂ ನಮ್ಮ ಸಮುದಾಯದ ಮುಖಂಡರು ಮನವಿ ಕೊಟ್ಟಿದ್ದರು. ಈ ಕುರಿತಾಗಿ ಮುಖ್ಯಮಂತ್ರಿಗಳು ‘ವರದಿ ಬರಲಿ, ವ್ಯತ್ಯಾಸಗಳು ಇದ್ದರೆ ಸರಿಪಡಿಸೋಣ ಎಂದು ಹೇಳಿದ್ದಾರೆ. ಅದಕ್ಕೆ ವರದಿಯಲ್ಲಿನ ಲೋಪದೋಷಗಳು ಇದ್ರೆ ಸರಿಪಡಿಸುತ್ತಾರೆ ಎಂಬ ವಿಶ್ವಾಸ ನಮಗೆಲ್ಲ ಇದೆ ಎಂದು ಹೇಳಿದರು.

ಬಳಿಕ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ‘ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಬ್ಯುಸಿನೆಸ್​ಗೂ ಆಗಿರಬಹುದು, ಬಿಜೆಪಿಯವರಿಗೆ ಕೇವಲ ಹಿಂದೂ, ಮುಸ್ಲಿಮರು ಮಾತ್ರ ಕಾಣುತ್ತಿದ್ದಾರೆ. ಈ ಹಿಂದೆ ನಡೆದ ಹಲವು ಘಟನೆಗಳಲ್ಲಿ ಬಿಜೆಪಿಯವರ ಕೈವಾಡ ಇದೆ. ಆದರೆ, ರಾಮೇಶ್ವರಂ ಕೆಫೆ ಸ್ಫೋಟ ಕೇಸ್​​ನಲ್ಲಿ ಬಿಜೆಪಿ ಕೈವಾಡ ಎಂದು ಹೇಳಲ್ಲ. ಈ ಹಿಂದೆ ಇಂತಹದ್ದೇ ಘಟನೆಗಳಾದಾಗ ಬಿಜೆಪಿಯ ಕೈವಾಡ ಇತ್ತು. ಇದು ತನಿಖೆಯಲ್ಲಿ ಸಾಬೀತು ಕೂಡ ಆಗಿದೆ ಎಂದು ಹೊಸ ಬಾಂಬ್​ ಹಾಕಿದ್ದಾರೆ. ಇನ್ನು ಈ ಘಟನೆ ಕುರಿತು ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರ ಬರುತ್ತದೆ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular