Wednesday, April 9, 2025
Google search engine

Homeರಾಜಕೀಯಗ್ಯಾರಂಟಿಗಳು ನಿಮ್ಮ ಸರ್ಕಾರದ್ದೋ ಅಥವಾ ಕೇಂದ್ರ ಸರ್ಕಾರದ್ದೋ?: ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ

ಗ್ಯಾರಂಟಿಗಳು ನಿಮ್ಮ ಸರ್ಕಾರದ್ದೋ ಅಥವಾ ಕೇಂದ್ರ ಸರ್ಕಾರದ್ದೋ?: ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ

ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ಅಕ್ಕಿ ನಿರಾಕರಣೆ ಆರೋಪ ಮಾಡಿದ್ದು, ಈ ಸಂಬಂಧ ಇಂದು ಕಾಂಗ್ರೆಸ್​ ನಡೆಸುತ್ತಿರುವ ಪ್ರತಿಭಟನೆಗೆ ರಾಜ್ಯ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಕೈಗೊಂಬೆಯಾಗಿರುವ ರಾಜ್ಯ ಎಟಿಎಂ ಸರ್ಕಾರ, ಪ್ರತಿಭಟನೆ ಎಂಬ ಬೃಹನ್ನಳೆ ನಾಟಕ ಪ್ರದರ್ಶನಕ್ಕೆ ಮುಂದಾಗಿದೆ. ನಿಮ್ಮ ಉಚಿತ ಖಚಿತ ನಿಶ್ಚಿತ ಬಟಾಬಯಲಾಗಿದೆ. ನೀವು ಹೇಳಿದ ಗ್ಯಾರಂಟಿಗಳು ನಿಮ್ಮ ಸರ್ಕಾರದ್ದೋ ಅಥವಾ ಕೇಂದ್ರ ಸರ್ಕಾರದ್ದೋ? ಎಂದು ಪ್ರಶ್ನಿಸಿದೆ.

ಕಳೆದ ಬಾರಿ ಮೋದಿ ಸರ್ಕಾರದ ಅಕ್ಕಿಯನ್ನೇ ನಿಮ್ಮ ಖಾಲಿ ಚೀಲಕ್ಕೆ ಹಾಕಿ ಹಂಚುವಾಗ ಏಕೆ ಸತ್ಯ ತಿಳಿಸಿರಲಿಲ್ಲ? ವಿದ್ಯುತ್ ದರ ಏರಿಕೆ, ಉಚಿತ ಬಸ್ ಪ್ರಯಾಣದ ವೈಫಲ್ಯವನ್ನು ಬೇರೆಡೆಗೆ ತಳ್ಳಲು ಈ ನಾಟಕವೇ? ಸತ್ಯ ಯಾವಾಗಲು ಕಹಿಯೇ. ಸಬೂಬು ಹೇಳದೆ, ನಾಟಕ ಮಾಡದೆ, ಮೋದಿ ಸರ್ಕಾರ ಈಗಾಗಲೇ ಉಚಿತವಾಗಿ ಕೊಡುತ್ತಿರುವ 5 ಕೆಜಿ ಅಕ್ಕಿ ಬಿಟ್ಟು ತಮ್ಮ ಗ್ಯಾರಂಟಿಯ 10 ಕೆಜಿ ಅಕ್ಕಿಯನ್ನು ರಾಜ್ಯಕ್ಕೆ ಕೊಡಬೇಕಾದ್ದು ಧರ್ಮ ಎಂದು ಬಿಜೆಪಿ ಟ್ವೀಟ್​ ಮಾಡುವ ಮೂಲಕ ಟೀಕಾ ಪ್ರಹಾರ ನಡೆಸಿದೆ.

RELATED ARTICLES
- Advertisment -
Google search engine

Most Popular