Monday, April 21, 2025
Google search engine

Homeರಾಜಕೀಯಕುರ್ಚಿಯನ್ನು‌ ಉಳಿಸಿಕೊಳ್ಳಲು ರೈತರನ್ನು ಬಲಿ ಕೊಡ್ತಾ ಇದ್ದೀರಾ.?: ಕಾಂಗ್ರೆಸ್ ವಿರುದ್ಧ ಡಿಸಿಎಂ  ಡಾ.ಅಶ್ವತ್ಥ್ ನಾರಾಯಣ್ ತೀವ್ರ...

ಕುರ್ಚಿಯನ್ನು‌ ಉಳಿಸಿಕೊಳ್ಳಲು ರೈತರನ್ನು ಬಲಿ ಕೊಡ್ತಾ ಇದ್ದೀರಾ.?: ಕಾಂಗ್ರೆಸ್ ವಿರುದ್ಧ ಡಿಸಿಎಂ  ಡಾ.ಅಶ್ವತ್ಥ್ ನಾರಾಯಣ್ ತೀವ್ರ ವಾಗ್ದಾಳಿ

ಮಂಡ್ಯ: ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಯಡವಟ್ಟು ಮಾಡಿದೆ. ಕುರ್ಚಿಯನ್ನು‌ ಉಳಿಸಿಕೊಳ್ಳಲು ರೈತರನ್ನು ಬಲಿ ಕೊಡ್ತಾ ಇದ್ದೀರಾ. ನಿಮ್ಮ ಬಲಿಯಾಗಬೇಕು ಹೊರತು, ರೈತರನ್ನು ಅಲ್ಲ ಎಂದು ಮಾಜಿ ಡಿಸಿಎಂ  ಡಾ.ಅಶ್ವತ್ಥ್ ನಾರಾಯಣ್  ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ವತಿಯಿಂದ ನಡೆಯುತ್ತಿರುವ ಚಡ್ಡಿ ಚಳವಳಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿ ರೈತರ ಪರವಾಗಿ ಹೋರಾಟ ಮಾಡ್ತಿದೆ. ಇಂದು ಮಂಡ್ಯ ರೈತರ ಟ್ರೇಡ್ ಮಾರ್ಕ್ ಆಗಿರೋ ಪಟಾಪಟಿ‌ ಚಡ್ಡಿ ಧರಿಸಿ ಪ್ರತಿಭಟನೆ ಮಾಡ್ತಾ ಇದೀವಿ. ತಮಿಳುನಾಡಿಗೆ ಬಿಡುತ್ತಿರೋ ನೀರು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಈ‌ ಹೋರಾಟ ತೀವ್ರತನಕ್ಕೆ ಹೋಗುತ್ತೆ.

ನೀರನ್ನು ಬಿಡಲ್ಲ ಎಂದು ಹೇಳಿದವರು ಅಧಿಕಾರ ಹೊರಟು ಹೋಗುತ್ತೆ ಎಂದು ನೀರು ಬಿಡ್ತಾ ಇದ್ದಾರೆ. ತಮಿಳುನಾಡಿನವರಿಗೆ ಎರಡನೇ ಬೆಳೆಗೆ ನೀರು ಕೊಡ್ತಾ ಇದ್ದಾರೆ. ನಮ‌್ಮ ಒಂದು ಬೆಳಗೆ ನೀರಿಲ್ಲ. ತಮಿಳುನಾಡಿನವರು ಮೂರು‌ ಬೆಳೆ ಬೆಳೆಯಬಹುದು. ನಾವು‌ ಒಂದು‌ ಬೆಳೆ ಬೆಳೆಯಬಾರದಾ ಎಂದು ಪ್ರಶ್ನಿಸಿದರು.

ಪೆನ್ನು ಪೇಪರ್ ಕೊಡಿ ಎಂದು ಕೇಳಿದ್ರು. ಪೆನ್ನು ಪೇಪರ್ ಕೊಟ್ಟರೆ ಇವರಿಗೆ ಏನು ಬೇಕು ಅದನ್ನು ಬರೆದುಕೊಳ್ಳುತ್ತಿದ್ದಾರೆ. ಕಾವೇರಿ ನೀರು ಕುಡಿಯಲು ಕೊಡಿ ಅಂದ್ರೆ ವಿಸ್ಕಿ, ಬ್ರಾಂದಿ‌ ಕೊಡ್ತೀವಿ ಎನ್ನುತ್ತಾರೆ. ಜನರನ್ನು ಕುಡಿಸಿ ಕುಡಿಸಿ ಹಾಳು ಮಾಡ್ತಾರೆ. ಈ ಸರ್ಕಾರ ವಿಸ್ಕಿ, ಬ್ರಾಂದಿ, ರಮ್ ಕೊಡೋ ಸರ್ಕಾರ. ನೀರು ಕೊಡೋ ಸರ್ಕಾರ ಬಿಜೆಪಿ ಎಂದರು.

ಸೆಟೆಲ್‌ ಮೆಂಟ್ ಮಾಡಿದೀವಿ ಅಂತಾ ಹೇಳ್ತಾರೆ. ಏನ್ ಸೆಟೆಲ್‌ಮೆಂಟ್ ಮಾಡಿದ್ದಾರೆ ಇವರು. ಕೇವಲ ವಿಸ್ಕಿ, ಬ್ರಾಂದಿ, ರಮ್ ಕುಡಿಸುತ್ತಿದ್ದಾರೆ ಇವರು ಅಷ್ಟೇ. ಇವರ ಚಡ್ಡಿ ಇಳಿಸಿ, ಅಧಿಕಾರದಿಂದ ಇಳಿಸುವ ಶಕ್ತಿ ಮಂಡ್ಯಗೆ ಇದೆ. ಇದಕ್ಕೆ ಇಂದಿನ ಚಡ್ಡಿ ಮೆರವಣಿಗೆಯೇ ಸಾಕ್ಷಿ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular