ಮಂಡ್ಯ:ಮಂಡ್ಯದ ನಾಗಮಂಗಲದ ಹನುಮನಹಳ್ಳಿಯಲ್ಲಿ ರೌಡಿಶೀಟರ್ ನಿಂದ ಸ್ವಂತ ಅಣ್ಣನ ಮಗನ ಹತ್ಯೆಯಾಗಿರುವ ಘಟನೆ ನಡೆದಿದೆ. ಸೀಮೆಎಣ್ಣೆ ಕುಮಾರ ಗುಂಡು ಹಾರಿಸಿ ತನ್ನ ಅಣ್ಣನ ಮಗನನ್ನೇ ಕೊಂದ ರೌಡಿ ಶೀಟರ್. ಸಹೋದರರ ನಡುವೆ ಜಮೀನಿನ ವಿಚಾರಕ್ಕೆ ಜಟಾಪಟಿ ನಡೆದಿದ್ದು, ಹನುಮನಹಳ್ಳಿ ಗ್ರಾಮದ ವಾಸು ಮತ್ತು ಆತನ ತಮ್ಮ ಸೀಮೆಎಣ್ಣೆ ಕುಮಾರನ ನಡುವೆ ಜಮೀನಿನ ಕಲಹ ಉಂಟಾಗಿತ್ತು.
ಜಮೀನು ಇತ್ಯರ್ಥಕ್ಕೆ ಇಂದು ಹನುಮನಹಳ್ಳಿಯಲ್ಲಿ ಮಾತುಕತೆಗೆ ಕರೆದಿದ್ದ ಸೀಮೆಎಣ್ಣೆ ಕುಮಾರ ಮಾತುಕತೆ ವೇಳೆ ಅಣ್ಣನ ಮಗ ಜೈಪಾಲ್ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ. ಮೂರು ಸುತ್ತು ಗುಂಡು ಹಾರಿಸಿದ ಸೀಮೆಎಣ್ಣೆ ಕುಮಾರ. ಗುಂಡೇಟಿನಿಂದ ಸ್ಥಳದಲ್ಲಿಯೇ ಜೈಪಾಲ್ ಸಾವನ್ನಪ್ಪಿದ್ದು, ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹ ರವಾನಿಸಲಾಗಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಯತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೌಡಿ ಶೀಟರ್ ಆಗಿರುವ ಸೀಮೆಎಣ್ಣೆ ಕುಮಾರ ಘಟನೆ ಬಳಿಕ ಎಸ್ಕೇಪ್ ಆಗಿದ್ದು, ಬಿಂಡಿಗನವಿಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.