ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಮತ್ತೊಂದು ಚಿತ್ರಮಂದಿರ ನೆಲಸಮ, ಮಂಡ್ಯದ ಹೃದಯ ಭಾಗದಲ್ಲಿದ್ದ ನಂದಾ ಟಾಕೀಸ್ ಬರಿ ನೆನಪು ಮಾತ್ರ. ೧೯೬೧ ಹೆಚ್.ಸಿ.ಚನ್ನಯ್ಯ ಎಂಬುವವರು ಸ್ಥಾಪಿಸಿದ್ದ ನಂದಾ ಚಿತ್ರಮಂದಿರ ಜಿಲ್ಲೆಯ ಜನರಿಗೆ ಮನರಂಜನೆ ನೀಡಿದ್ದ ನಂದಾ ಟಾಕೀಸ್ ಇಂದು ನೆಲಸಮ. ಗ್ರಾಮೀಣ ಭಾಗದ ಜನರು ಎತ್ತಿನ ಗಾಡಿಯಲ್ಲಿ ಬಂದು ಸಿನಿಮಾ ನೋಡ್ತಿದ್ದುದ್ದು ಇನ್ನು ಹಸಿರಾಗಿದೆ. ದಿನಕ್ಕೆ ೫ ಪ್ರದರ್ಶನ ನೀಡ್ತಿದ್ದ ನಂದಾ ದೀಪಾ ಇದೀಗ ಆರಿದೆ.
ಹೆಚ್.ಸಿ.ಚನ್ನಯ್ಯ ಇಂದು ಅವರ ಮಕ್ಕಳು ಚಿತ್ರಮಂದಿರವನ್ನ ನಡೆಸಿಕೊಂಡು ಉಳಿಸಿಕೊಂಡು ಬರ್ತಿದ್ದರು. ಸಂಕಷ್ಟದ ಸ್ಥಿತಿಗೆ ಸಿಲುಕಿದ ನಂದಾ ಚಿತ್ರಮಂದಿರ ನೆಲಸಮಗೊಳಿಸಿ ವಾಣಿಜ್ಯ ಸಂಕೀರ್ಣ ಮಾಡಲು ಮಾಲೀಕ ನಿರ್ಧಾರ ಮಾಡಿದ್ದಾರೆ.
ನಂದಾ ಸರ್ಕಲ್ ಎಂದೇ ಪ್ರಖ್ಯಾತಿಯಾಗಿತ್ತು ಬಸ್ ನಿಲ್ದಾಣ ಕೂಡ ನಿರ್ಮಾಣವಾಗಿತ್ತು ಇಂದಿಗೂ ನಂದಾ ಸರ್ಕಲ್ ಬಳಿ ಬಸ್ ನಿಲ್ದಾಣದಿಂದ ಜನರು ಬಸ್ ಅತ್ತುತ್ತಾರೆ. ಮೈಶುಗರ್ ಕಾರ್ಖಾನೆಗೆ ಬರುತ್ತಿದ್ದ ರೈತರು ನಂದಾ ಟಾಕೀಸ್‌ನಲ್ಲಿ ಸಿನಿಮಾ ವೀಕ್ಷಿಸಿ ಹೋಗುತ್ತಿದ್ದರು. ನಟ ಡಾ.ವಿಷ್ಣುವರ್ಧನ್ ಸಿನಿಮಾಗಳಿಗೆ ಹೇಳಿ ಮಾಡಿಸಿದಂತಹ ಟಾಕೀಸ್. ಸೋದರರ ಸವಾಲ್, ಸ್ನೇಹಿತರ ಸವಾಲ್, ರಾಜಕುಮಾರ್ ಅಭಿನಯದ ಬಬ್ರುವಾಹನ,ರಾಜ ನನ್ನ ರಾಜ, ಭಕ್ತ ಸಿರಿಯಾಳ ಸೇರಿ ಅನೇಕ ಚಿತ್ರಗಳು ಪ್ರದರ್ಶನ. ಹಿರಿಯ ನಾಯಕರಿಗೆ ಹೆಸರು ತಂದು ಕೊಟ್ಟ ಚಿತ್ರಮಂದಿರ ಇಂದು ಬರಿ ನೆನಪು ಮಾತ್ರ.